Thursday, December 5, 2024

ಸಂಭಾಲ್​ ಹಿಂಸಾಚಾರ : 10 ದಿನಗಳಲ್ಲಿ ಮಸೀದಿ ಸಮೀಕ್ಷಾ ವರದಿ ಸಲ್ಲಿಸುವಂತೆ ಸೂಚಿಸಿದ ಹೈಕೋರ್ಟ್​

ಲಖ್ನೋ : ಸಂಭಾಲ್​ನ ಜಾಮಾ ಮಸೀದಿಯನ್ನು ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆಗೆ ಉತ್ತರ ಪ್ರದೇಶ ಕೋರ್ಟ್ ಇಲ್ಲಿ ಸಮೀಕ್ಷೆಗೆ ಆದೇಶ ಸೂಚಿಸಿತ್ತು. ಇದಕ್ಕಾಗಿ ಸಮೀಕ್ಷಾ ತಂಡವನ್ನೂ ಕೂಡ ರಚನೆ ಮಾಡಿತ್ತು. ಆದರೆ ಸಮೀಕ್ಷೆ ಮಾಡಲು ತೆರಳಿದ್ದವರ ಮೇಲೆ ಉದ್ರಿಕ್ತರ ಗುಂಪು ಹಲ್ಲೆ ಮಾಡಿತ್ತು, ಮತ್ತು ಇದು ಅತಿ ದೊಡ್ಡ ಹಿಂಸಾಚಾರಕ್ಕೂ ಕಾರಣವಾಗಿತ್ತು. ಇದರ ಕುರಿತು ಇಂದು ಉತ್ತರ ಪ್ರದೇಶ್​ ಹೈಕೋರ್ಟ್​ ಮಹತ್ವದ ಆದೇಶ ನೀಡಿದೆ.

ಉತ್ತರ ಪ್ರದೇಶದಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿರುವ ಸಂಭಾಲ್ ನ ಜಾಮಾ ಮಸೀದಿ ಆವರಣದಲ್ಲಿನ ಸಮೀಕ್ಷಾ ವರದಿಯನ್ನು ಇನ್ನು 10 ದಿನಗಳಲ್ಲಿ ಸಲ್ಲಿಕೆ ಮಾಡುವಂತೆ ಉತ್ತರ ಪ್ರದೇಶ ಕೋರ್ಟ್ ಆದೇಶ ಶುಕ್ರವಾರ ಆದೇಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿಕೆ ಮಾಡಿದೆ.

ಏನಿದು ಸಂಭಾಲ್​​ ವಿವಾದ !

ಸಂಭಾಲ್​ನಲ್ಲಿರುವ ಜಾಮಾ ಮಸೀದಿಯನ್ನು ಬಾಬರ್ ನಿರ್ಮಿಸಿದ್ದು, 1526 ರಿಂದ 1528ರ ಅವಧಿಯಲ್ಲಿ ನಿರ್ಮಿಸಿದ್ದಾನೆ ಎಂದು ಇತಿಹಾಸದ ಪುರಾವೆಗಳು ಸಾಭೀತು ಪಡಿಸಿವೆ. ಆದರೆ ಈ ಮಸೀದಿಗಿಂತ ಮೊದಲು ಆ ಜಾಗದಲ್ಲಿ ಹಿಂದುಗಳ ಪವಿತ್ರ ಹರಿಹರ ದೇವಾಲಯವಿತ್ತು ಎಂದು ನಂಬಲಾಗಿದೆ. ಈ ದೇವಸ್ಥಾನವನ್ನು ಕೆಡವಿದ ಬಾಬರ್​ ಇದರ ಮೇಲೆ ಮಸೀದಿ ನಿರ್ಮಿಸಿದ್ದಾನೆ ಎಂದು ಹಿಂದು ಪರ ಅರ್ಜಿದಾರದು ಆರೋಪಿಸಿದ್ದಾರೆ. ಇದರ ಕುರಿತು 1971ರಲ್ಲಿ ACI ಕಾರ್ಲೆನ್​ ಎಂಬ ಬ್ರಿಟಿಷ್​​ ಅಧಿಕಾರಿ ತನ್ನ ಗ್ರಂಥದಲ್ಲಿ ಬರೆದುಕೊಂಡಿದ್ದು. ಈ ಮಸೀದಿಯ ಕಂಬಗಳನ್ನು ಕೆರೆದರೆ ಅಲ್ಲಿ ಹಿಂದೂ ದೇವಾಲಯದ ಕುರುಹುಗಳು ಸಿಗುತ್ತದೆ ಎಂದು ಆತ ತನ್ನ ಗಂಥದಲ್ಲಿ  ಬರೆದುಕೊಂಡಿದ್ದಾನೆ.

ಸಂಭಾಲ್​ ಹಿಂದೂಗಳಿಗೆ ಪವಿತ್ರ ಕ್ಷೇತ್ರವೇಕೆ !

ಪ್ರಸ್ತತು ಸಂಭಾಲ್​ನಲ್ಲಿ ಶೇಕಡಾ 70% ರಷ್ಟು ಮುಸಲ್ಮಾನರಿದ್ದರು ಸಹ ಈ ಜಾಗ ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ. ಹಿಂದೂಗಳ ನಂಬಿಕೆಯ ಪ್ರಕಾರ ವಿಷ್ಣುವಿನ ಹತ್ತನೇ ಅವತಾರವಾದ ಕಲ್ಕಿ ಇದೇ ಜಾಗದಲ್ಲಿ ಜನಿಸಲಿದ್ದು, ಜಗತ್ತಿನಲ್ಲಿ ನಡೆಯುತ್ತಿರುವ ಅಧರ್ಮವನ್ನು ನಾಶಮಾಡಿ, ಹೊಸ ಯುಗಕ್ಕೆ ನಾಂದಿಯಾಡುತ್ತಾರೆ ಎಂದು ಹಿಂದೂಗಳು ನಂಬಿಕೆ ಇಟ್ಟಿದ್ದಾರೆ.

 

 

 

RELATED ARTICLES

Related Articles

TRENDING ARTICLES