Thursday, December 5, 2024

ಮಕ್ಕಳ ವಿಚಾರಕ್ಕೆ ಜಗಳ : ಪ್ರಾಂಶುಪಾಲನ ಮೂಗು ಮುರಿದ ಪೋಲಿಸ್​ ಪೇದೆ

ರಾಯಚೂರು: ಮಕ್ಕಳ ವಿಚಾರಕ್ಕೆ ಆರಂಭವಾದ  ಜಗಳ ತಾರಕ್ಕಕ್ಕೆ ಹೋಗಿದ್ದು. ಇದಿರಂದ ಕುಪಿತನಾದ ಪೋಲಿಸ್​ ಪೇದೆಯೊಬ್ಬ ಪಕ್ಕದ ಮನೆಯ ಪ್ರಾಂಶುಪಾಲನ ಮೂಗಿನ ಮೂಳೆಯನ್ನೆ ಮುರಿದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ನಗರದ, ರಾಜಮಾತಾ ದೇವಸ್ಥಾನ ಹತ್ತಿರದಲ್ಲಿ ಡಿಎಆರ್​ ಪೋಲಿಸ್​ ಪೇದೆ ವಾಸು ಮತ್ತು ಪ್ರಾಂಶುಪಾಲ ಮೆಹಬೂಬ್​ ಅಲಿ ಮನೆಯಿದೆ. ಆದರೆ ಇತ್ತೀಚೆಗೆ ಮನೆಯ ಮಕ್ಕಳ ವಿಚಾರಕ್ಕೆ ಜಗಳವಾಗಿದ್ದು ಪೋಲಿಸ್​ ಪೇದೆ ವಾಸು ಸೇರಿದಂತೆ ವಾಸು ಅತ್ತಿಗೆ, ತಾಯಿ ಮತ್ತು ಆತನ ತಂಗಿ ಮೆಗಬೂಬ್​ ಅಲಿ ಮನೆಗೆ ನುಗ್ಗಿ ಕಸದ ಪೊರಕೆ ಮತ್ತು ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿದ್ದಾರೆ.

ಈ ವೇಳೆ ಪೇದೆ ವಾಸು, ಮೊಹಬೂಬ್​ ಅಲಿಯ ಮೂಗು ಮತ್ತು ದವಡೆಗೆ ತನ್ನ ಕೈಮುಷ್ಟಿಯಿಂದ ಬಲವಾಗಿ ಗುದ್ದಿದ್ದು. ಈ ವೇಳೆ ಮೆಹಬೂಬ್​ ಅಲಿ  ತೀವ್ರವಾಗಿ ಗಾಯಗೊಂಡಿದ್ದು ದವಡೆ ಹಲ್ಲು ಮತ್ತು ಮೂಗಿನ ಮೂಳೆ ಮುರಿದಿದೆ. ತೀವ್ರವಾಗಿ ಗಾಯಗೊಂಡ ಮೆಹಬೂಬ್​ ಅಲಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ಅಷ್ಟೆ ಅಲ್ಲದೆ ವಾಸು ಕುಟುಂಬಸ್ಥರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಜೀವಬೆದರಿಕೆಯನ್ನು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಗೆ ಒಳಗಾದ ಮೆಹಬೂಬ್​ ಅಲಿ ಮತ್ತು ಕುಟುಂಬಸ್ಥರು ರಾಯಚೂರು ಪಶ್ಚಿಮ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES