ಚಾಮರಾಜನಗರ: ಹೆಣ್ಣಾನೆ ಮೃತ ದೇಹ (30) ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕುಂದಕೆರೆ ವಲಯದಲ್ಲಿ ನಡೆದಿದೆ.
ಮೇಲೋಟಕ್ಕೆ ಆಂಥಾಕ್ಸ್ ಕಾಯಿಲೆಯಿಂದ ಹೆಣ್ಣಾನೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಬಾಚಹಳ್ಳಿ ಗ್ರಾಮದ ಸರ್ವೇ ನಂ-516ರ ಪ್ರದೇಶದಲ್ಲಿ ಹೆಣ್ಣಾನೆ ಮೃತದೇಹ ಪತ್ತೆಯಾಗಿದ್ದು, ಆನೆಯು ಆಂಥಾಕ್ಸ್ (Anthrax) ಕಾಯಿಲೆಯಿಂದ ಮೃತ ಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಂಕೆಯಾಗಿದೆ.
ಅರಣ್ಯ ಇಲಾಖೆ ಗಸ್ತು ತಿರುಗುತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಹಾಗೂ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸದ್ಯ ಮೃತ ಆನೆಯ ಅಂಗಾಂಗಗಳ ಮಾದರಿಗಳನ್ನು ಸಂಗ್ರಹಿಸಿ, ಬೆಂಗಳೂರಿನ ವಿಜ್ಞಾನ ಪ್ರಯೋಗ ಶಾಲೆ ರವಾನೆ ಮಾಡಲಾಗಿದೆ.