Thursday, December 5, 2024

ಕಿರುತೆರೆ ನಟಿ ದೀಪಿಕಾ ದಾಸ್​ ತಾಯಿಗೆ ಬೆದರಿಕೆ !

ಬೆಂಗಳೂರು : ಕಿರುತೆರೆ ನಟಿ ದೀಪಿಕಾ ದಾಸ್ ತಾಯಿಗೆ ಬೆದರಿಕೆ ಹಾಕಲಾಗಿದೆ ಎಂದು ಮಾಹಿತಿ ದೊರೆತಿದ್ದು. ಕಿಡಿಗೇಡಿಯೊಬ್ಬ ಮಧ್ಯರಾತ್ರಿ  ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ತಿಳಿದು ಬಂದಿದೆ. ಕೃತ್ಯ ಸಂಬಂಧ ದೀಪಿಕಾದಾಸ್​ ತಾಯಿ ಪದ್ಮಲತಾ ಮಾದನಾಯಕನಹಳ್ಳಿ ಪೋಲಿಸ್​ ಠಾಣೆಗೆ ದೂರು ನೀಡಿದ್ದು. ಪೋಲಿಸರು ಕಿಡಿಗೇಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

ಮಾದನಾಯಕನಹಳ್ಳಿ ಪೋಲಿಸ್​ ಠಾಣೆಗೆ ದೀಪಿಕಾ ದಾಸ್​ ತಾಯಿ ದೂರು ನೀಡಿದ್ದು. ತಮ್ಮ ದೂರಿನಲ್ಲಿ ಕಿಡಿಗೇಡಿಯಿಂದ ಆಗಿರುವ ಕೃತ್ಯದ ಬಗ್ಗೆ ವಿವರಿಸಿದ್ದಾರೆ.’ನನ್ನ ಮಗಳು ಚಲನ ಚಿತ್ರ ನಟಿಯಾಗಿದ್ದು
8 ತಿಂಗಳ ಹಿಂದೆ ದೀಪಕ್ ಕುಮಾರ್ ಎನ್ನುವವರ ಜೊತೆ ವಿವಾಹವಾಗಿರುತ್ತೆ. ಮಗಳು ಮತ್ತು ಅಳಿಯ 1 ತಿಂಗಳ ಹಿಂದೆ ಇಂಗ್ಲೇಡ್ ಪ್ರವಾಸಕ್ಕೆ ಹೋಗಿರ್ತಾರೆ. ಹೀಗೆ ಅಪರಿಚಿತ ವ್ಯಕ್ತಿಯೊಬ್ಬ ನನಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಯಾಕೆ ಮದುವೆ ಮಾಡಿದ್ರಿ. ನಿಮ್ಮ ಅಳಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ, ಜನರಿಗೆ ಮೋಸ ಮಾಡಿರುತ್ತಾನೆ ಎಂದಿದ್ದ. ನಾನು ಹಾಗೇನಾದ್ರು ಇದ್ರೆ ಕಾನೂನಾತ್ಮಕವಾಗಿ ದೂರು ನೀಡುವಂತೆ ಹೇಳಿದ್ದ’ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಕೆಲವು ದಿನಗಳ ನಂತರ ನನ್ನ ಮಗಳು ದೀಪಿಕಾ ದಾಸ್ ಗೆ ಕರೆ ಮಾಡಿದ್ದ ಕಿಡಿಗೇಡಿ.  ನಿಮ್ಮ ಯಾಜಮಾನರ ಅಕ್ರಮ ಚಟುವಟಿಕೆಗಳಿಂದ ಜನರಿಗೆ ಮೋಸವಾಗಿರುವುದು ನಿಮಗೆ ತಿಳಿದಿಲ್ಲವೆ. ನೀವೂ ಪುನೀತ್​ರಾಜ್ ಕುಮಾರ್ ಸಮಾಧಿ ಬಳಿ ಬಂದು ಆಣೆ ಮಾಡುವಂತೆ ಕೇಳಿದ್ದ. ಆದರೆ ನನ್ನ ಮಗಳು ಈ ಆರೋಪಗಳೆಲ್ಲ ಸುಳ್ಳು ಇದರಲ್ಲಿ ಪುನೀತ್​ರನ್ನು ಮಧ್ಯ ತರಬೇಡಿ, ನೀವು ಕಾನೂನು ಮೂಲಕ ಹೋರಾಟ ಮಾಡಿ’ ಎಂದು ಹೇಳಿದ್ದಳು.

ಆದರೆ ಇದಕ್ಕೆ ಜಗ್ಗದ ಆರೋಪಿ ‘ ನಿಮ್ಮ ಹೆಸರಿಗೆ ಧಕ್ಕೆ ತರುತ್ತೇನೆ ನನಗೆ ಹಣ ನೀಡಿ, ಇಲ್ಲದಿದ್ದರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದನು. ಪದೇ ಪದೇ ಪೋನ್​ ಮೂಲಕ ಕರೆ ಮಾಡಿ ನನ್ನ ಮಗಳು ಮತ್ತು ಅಳಿಯನ ಘನತೆಗೆ ಧಕ್ಕೆ ತರುವ ಕೆಲಸ ಮಾಡುವ ಕೆಲಸ ಮಾಡುತ್ತಿದ್ದಾರೆ. ಯಶವಂತ ಎಂಬಾತನಿಂದ ಈ ಕೃತ್ಯವಾಗುತ್ತಿದ್ದು, ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೋಲಿಸರು, ಆರೋಪಿಯ ವಿರುದ್ದ ಬಿಎನ್​​ಎನ್​​ ಕಾಯ್ದೆ 308(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಕುರಿತು ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES