Tuesday, January 7, 2025

ಸುದೀಪ್​ ಅಭಿಮಾನಿಗಳಿಗೆ ಗುಡ್​ನ್ಯೂಸ್ : ಮ್ಯಾಕ್ಸ್​ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ​

ಬೆಂಗಳೂರು: ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’  ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅಂತೂ ಇಂತೂ ಕಿಚ್ಚನ ಅಭಿಮಾನಿಗಳ ಕಾತರಕ್ಕೆ ಉತ್ತರ ಸಿಕ್ಕಿದೆ. ಇದೇ ಡಿಸೆಂಬರ್ 25ಕ್ಕೆ ಮ್ಯಾಕ್ಸ್ ಅಬ್ಬರ ಶುರುವಾಗಲಿದೆ ಎಂದು ಮಾಹಿತಿ ದೊರೆತಿದೆ.

ಕಾರಾಣಾಂತರಗಳಿಂದ ಮ್ಯಾಕ್ಸ್​ ಸಿನಿಮಾದ ದಿನಾಂಕವನ್ನು ಮುಂದೂಡುತ್ತಾ ಬಂದಿದ್ದ ಚಿತ್ರತಂಡ ಇದೀಗ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಬಿಡುಗಡೆ ಬಗ್ಗೆ ಚಿತ್ರದ ನಟ ಸುದೀಪ್​ ಕೂಡ ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದಿದ್ದರಿಂದ ಕಿಚ್ಚನ ಅಭಿಮಾನಿಗಳು ಕೂಡ ಬೇಸರವಾಗಿದ್ದರು. ಆದರೆ ಇದೀಗ ಚಿತ್ರದ ದಿನಾಂಕ ಬಿಡುಗಡೆಯಾಗಿದೆ.

RELATED ARTICLES

Related Articles

TRENDING ARTICLES