Wednesday, January 8, 2025

ಎರಡನೇ ಟೆಸ್ಟ್​ ಪಂದ್ಯಕ್ಕೂ ಮುನ್ನವೆ ತವರಿಗೆ ಮರಳಿದ ಕೋಚ್​ ಗಂಭೀರ್​

ಪರ್ಥ್​: ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಭಾರತ -ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಸೋಮವಾರ ಮುಕ್ತಾಯವಾಗಿದ್ದು, ಮಂಗಳವಾರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ದಿಢೀರ್ ಆಗಿ ತವರಿಗೆ ಮರಳಿದ್ದಾರೆ ವೈಯಕ್ತಿಕ ಕಾರಣದಿಂದ ಗಂಭೀರ್ ಭಾರತಕ್ಕೆ ಮರಳಿರುವುದಾಗಿ ತಿಳಿದುಬಂದಿದೆ. ಅಡಿಲೇಡ್‌ನಲ್ಲಿ ಡಿಸೆಂಬ‌ರ್ 6ರಂದು ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

‘ಇಂದು ಮುಂಜಾನೆ ತಮ್ಮ ಕುಟುಂಬದೊಂದಿಗೆ ಗಂಭೀರ್ ಭಾರತಕ್ಕೆ ಮರಳಿದ್ದಾರೆ. ಕೌಟುಂಬಿಕ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಇದು ಅನಿವಾರ್ಯವಾಗಿದೆ. ಎರಡನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮೊದಲು ಅವರು ಅಡಿಲೇಡ್‌ಗೆ ಹಿಂದಿರುಗುವ ಸಾಧ್ಯತೆಯಿದೆ’ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 295 ರನ್‌ಗಳಿಂದ ಜಯಿಸಿತ್ತು.

RELATED ARTICLES

Related Articles

TRENDING ARTICLES