Sunday, January 5, 2025

ಬೀದರ್‌ನಲ್ಲಿ ವಕ್ಫ್ ವಿರುದ್ಧ ಯತ್ನಾಳ್​ ಆ್ಯಂಡ್​ ಟೀಮ್​ ಹೋರಾಟ: ಸ್ಥಳದಲ್ಲಿ ಪೋಲಿಸ್​ ಬಿಗಿ ಭದ್ರತೆ

ಬೀದರ್: ಇಂದು(ನ.24) ಗಡಿಜಿಲ್ಲೆ ಬೀದರ್‌ನಲ್ಲಿ ವಕ್ಫ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ತಂಡದಿಂದ  ಹೋರಾಟ ನಡೆಯುತ್ತಿದ್ದು. ಬೆಳಿಗ್ಗೆ 8.30ಕ್ಕೆ ಬೀದರ್‌ನ ಪ್ರಸಿದ್ಧ ಝರಣಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ರೆಬಲ್ಸ್​​ ನಾಯಕರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹೋರಾಟ ಆರಂಭಿಸಿದ್ದಾರೆ.

ವಕ್ಫ್​ ವಿರುದ್ದದ ಹೋರಾಟಕ್ಕಾಗಿ ರಾಜ್ಯ ಬಿಜೆಪಿ  ಮೂರು ತಂಡಗಳನ್ನು ಮಾಡಿದ್ದು. ಇದರ ಹೊರತಾಗಿಯೂ ಬಿಜೆಪಿ ರೆಬಲ್ಸ್​ ನಾಯಕರು ಪ್ರತ್ಯೇಕ ಹೋರಾಟ ನಡೆಸುತ್ತಿದ್ದಾರೆ. ಯತ್ನಾಳ್​ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಬೀದರ್ ಜಿಲ್ಲಾ ಶಾಸಕರು ಗೈರಾಗಿದ್ದು. ಹೋರಾಟಕ್ಕೆ ಹಿಂದೂ ಪರ ಸಂಘಟನೆಗಳು ಸಾಥ್​ ನೀಡಿವೆ ಭಜರಂಗದಳ, ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್, ರಾಷ್ಟ್ರ ರಕ್ಷಣಾ ಪಡೆ ಸೇರಿ 10ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.

ಹೋರಾಟದಲ್ಲಿ ಬಸನಗೌಡಪಾಟೀಲ್​​ ಯತ್ನಾಳ್​ ಸೇರಿದಂತೆ ಅರವಿಂದ ಲಿಂಬಾವಳಿ, ಕುಮಾರಬಂಗಾರಪ್ಪ, ರಮೇಶ್​ ಜಾರಕಿಹೋಳಿ ಸೇರಿದಂತೆ ಅನೇಕ ಬಿಜೆಪಿ ರೆಬಲ್ಸ್​ ನಾಯಕರು ಭಾಗವಹಿಸಿದ್ದು. ಬೀದರ್​ನ ಗಣೇಶ ಮೈದಾನದಿಂದ ಬೀದರ್​ ಜಿಲ್ಲಾಧಿಕಾರಿ ಕಛೇರಿಯವರೆಗು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಬೀದರ್‌ ಜಿಲ್ಲೆಯಲ್ಲಿ ಬರೋಬ್ಬರಿ 13,295 ಎಕರೆ ಜಮೀನು ವಕ್ಫ್​ ಬೋರ್ಡ್​ ವಶಕ್ಕೆ ಹೋಗಿದ್ದು. ಪ್ರಸಿದ್ದ ಬಸವಗಿರಿಯ ಬಸವ ಸೇವಾ ಪ್ರತಿಷ್ಠಾನದ 5 ಎಕರೆ 15 ಗುಂಟೆ ಜಾಗದ ಪಹಣಿಯಲ್ಲೂ ವಕ್ಫ್ ಬೋರ್ಡ್‌ ಹೆಸರು ನಮೂದಾಗಿರುವುದು ಬೆಳಕಿಗೆ ಬಂದಿದ್ದು ಹೋರಾಟ ತೀವ್ರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಗಿ ಭದ್ರತೆಯಲ್ಲಿ ನಡೆಯುತ್ತಿದೆ ಹೋರಾಟ 

ವಕ್ಫ್ ಹೋರಾಟ ಹಿನ್ನೆಲೆ ಬೀದರ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಸುಮಾರು 150 ಅಧಿಕ ಪೊಲೀಸರನ್ನು ನಿಯೋಜಿಸಿದ್ದು. 1 ಡಿಎಸ್‌ಪಿ, 5 ಇನ್ಸ್‌ಪೆಕ್ಟರ್, 10 ಪಿಎಸ್‌ಐ, 15 ಎಎಸ್‌ಐ, 80 HC ಮತ್ತು PC , 20 ಮಹಿಳಾ ಸಿಬ್ಬಂದಿ, 2 ಡಿಆರ್, 1 KSRP, 10 ಜನರ ಕ್ರೈಂಟೀಂಗಳನ್ನು ಒಳಗೊಂಡ ಬಿಗಿ ಭದ್ರತೆ ಕೈಗೊಳ್ಳೊಲಾಗಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES