Saturday, August 23, 2025
Google search engine
HomeUncategorizedಜೆಡಿಎಸ್​​ ಪಕ್ಷ ನಶಿಸಿ ಹೋಗುತ್ತಿದೆ, ಶಾಸಕರೆಲ್ಲಾ ಬೇರೆ ಪಕ್ಷದ ಕಡೆ ಮುಖ ಮಾಡಿದ್ದಾರೆ : ಯೋಗೇಶ್ವರ್​

ಜೆಡಿಎಸ್​​ ಪಕ್ಷ ನಶಿಸಿ ಹೋಗುತ್ತಿದೆ, ಶಾಸಕರೆಲ್ಲಾ ಬೇರೆ ಪಕ್ಷದ ಕಡೆ ಮುಖ ಮಾಡಿದ್ದಾರೆ : ಯೋಗೇಶ್ವರ್​

ರಾಮನಗರ : ಚನ್ನಪಟ್ಟಣದ ನೂತನ ಶಾಸಕ ಸಿಪಿ ಯೋಗೆಶ್ವರ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು. ಜೆಡಿಎಸ್​​ ಕುಟುಂಬದ ಪಕ್ಷವಾಗಿದೆ. ಆದ್ದರಿಂದ ಜೆಡಿಎಸ್​ ಪಕ್ಷ ನಶಿಸಿ ಹೋಗುತ್ತಿದೆ. ಇದರಿಂದಾಗಿ ಜೆಡಿಎಸ್​ ಪಕ್ಷದ ಶಾಸಕರು ಭವಿಷ್ಯಕ್ಕಾಗಿ ಬೇರೆ ಪಕ್ಷಗಳ ಕಡೆಗೆ ಮುಖ ಮಾಡಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಗೆ ಕರೆತರುವ ವಿಚಾರವಾಗಿ ಮಾತನಾಡಿದ ನೂತನ ಶಾಸಕ ಸಿ.ಪಿ ಯೋಗೇಶ್ವರ್ ‘​ ಜೆಡಿಎಸ್​​ ದೇವೆಗೌಡರು ಹುಟ್ಟುಹಾಕಿದ ಪಕ್ಷ. ಅವರಿಗೆ ವಯಸ್ಸಾಗಿರುವುದರಿಂದ ಪಕ್ಷ ಮುನ್ನಡೆಸಲು ಸಾಧ್ಯ ಆಗ್ತಿಲ್ಲ.ಅದಕ್ಕೆ ಪರ್ಯಾಯವಾದ ನಾಯಕತ್ವ ಜೆಡಿಎಸ್​​ನಲ್ಲಿಲ್ಲ. ಅದೊಂದು ಕುಟುಂಬ ಪಕ್ಷ‌ವಾಗಿದ್ದು
ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಕಳೆದ‌ ಚುನಾವಣೆಯಲ್ಲಿ ಕೇವಲ 19 ಸೀಟು ಪಡೆದುಕೊಂಡಿತ್ತು.
ಅದೇ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 136 ಸೀಟು ಗೆಲ್ತಾರೆ. ಈ ಎರಡು ಹೋಲಿಕೆ ನೋಡಿದ್ರೆ ಗೊತ್ತಾಗುತ್ತೆ ಕುಮಾರಸ್ವಾಮಿ ನಾಯಕತ್ವ ಕ್ಷೀಣಿಸುತ್ತಿದೆ ‘ಎಂದು ಹೇಳಿದರು.

ಜೆಡಿಎಸ್​​ನಲ್ಲಿ ಕುಟುಂಬ ರಾಜಕಾರಣದಿಂದ ಪಕ್ಷಕ್ಕೆ ದಕ್ಕೆಯಾಗುತ್ತಿದೆ ಎಂಬುದಕ್ಕೆ ‘ಚನ್ನಪಟ್ಟಣ ಉಪಚುನಾವಣೆ ಫಲಿತಾಂಶವೇ ಸಾಕ್ಷಿ.ಇಡೀ ಕುಟುಂಬವೇ ಹೋರಾಟ ಮಾಡಿದ್ರು ಚನ್ನಪಟ್ಟಣ ಗೆಲ್ಲಲು ಸಾಧ್ಯ ಆಗಲಿಲ್ಲ.
ಅವರ ನಂಬಿರೋ ಕಾರ್ಯಕರ್ತರು, ಬಹಳ ಜನ ಶಾಸಕರು ನೊಂದಿದ್ದಾರೆ. ಏನಾದ್ರೂ ಮನಸ್ಸು ಮಾಡಿದ್ರೆ, ಅವರಿಗೆ ಬೇರೆ ಅವಕಾಶ ಇತ್ತು. ಆದರೆ ಅವರು ಪಕ್ಷವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದ್ರು’ ಎಂದು ಹೇಳಿದರು.

ಒಕ್ಕಲಿಗ ನಾಯಕತ್ವ ಬದಲಾವಣೆ ಆಗಬೇಕು !

ಜಾತಿ ರಾಜಕಾರಣದ ಬಗ್ಗೆ ಮಾತನಾಡಿದ ಸಿಪಿವೈ ‘ಒಕ್ಕಲಿಗ ನಾಯಕತ್ವ ಬದಲಾವಣೆ ಆಗಬೇಕು. ಜನರು
ಪರ್ಯಾಯವಾಗಿ ನಾಯಕತ್ವ ಹುಡುಕುತ್ತಾ ಇದ್ದಾರೆ. ಮುಂದೆ ಯಾರಿಗೆ ಅವಕಾಶ ಸಿಗುತ್ತದೆ ನೋಡೊಣ. ಆದರೆ ಜನರು ದೇವೇಗೌಡರಿಂದ ಸಮುದಾಯವನ್ನುಆಚೆ ತರಬೇಕು ಎಂದು ತೀರ್ಮಾನಿಸಿದ್ದಾರೆ ಎಂದು ಈ ಬಾರಿಯ ಚುನಾವಣೆಯಲ್ಲಿ ಗೊತ್ತಾಗಿದೆ. ಅವರ ಕುಟುಂಬದಲ್ಲಿ ನಡೆದಿರೋ ಹಲವಾರು ಬೆಳವಣಿಗೆಗಳಿಂದ ಸಮುದಾಯ ಬೇಸತ್ತಿದೆ. ಇದರಿಂದ ಅವರು ಶಾಸಕರು ಬೇಸತ್ತಿದ್ದಾರೆ’ ಎಂದು ಹೇಳಿದರು.

ಜೆಡಿಎಸ್​ ಶಾಸಕರು ಕಾಂಗ್ರೆಸ್​ ಸೇರ್ಪಡೆ ವಿಚಾರಕ್ಕೆ ಸ್ಪಷ್ಟನೆ ಕೊಟ್ಟ ಸೈನಿಕ !

ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನ ಎಂಬ ಸಿಎಂ ಹೇಳಿಕೆ ‌ಚರ್ಚೆ ಬೆನ್ನಲ್ಲೆ ಜೆಡಿಎಸ್ ಶಾಸಕರು ಕೈ ಸೇರ್ತಾರೆ ಎಂಬ ಸಿಪಿವೈ ಹೇಳಿಕೆ ಭಾರೀ ಸಂಚನನ ಸೃಷ್ಟಿಸಿದ್ದು. ಇದಕ್ಕೆ ಸ್ಪಷ್ಟನೆ ನೀಡಿದ ಸೈನಿಕ ‘ಸರ್ಕಾರ ಸುಭದ್ರ ವಾಗಿದೆ. ಹಿಂದೆ 136 ಇತ್ತು ಈಗ 139 ಆಗಿದೆ. ಆದರೆ  ಜೆಡಿಎಸ್ ಕುಸಿತ ಕಾಣುತ್ತಿದ್ದು, ನಶಿಸಿ ಹೋಗ್ತಿದೆ.
ಪಕ್ಷ ನಶಿಸಿಹೋದಾಗ,‌ ಶಾಸಕರು ಬೇರೆ ಕಡೆ ಮುಖ ಮಾಡೋದು ಸಹಜ. ಭವಿಷ್ಯದಲ್ಲಿ ರಾಜಕೀಯವಾಗಿ ಏನೇನು ಬೆಳವಣಿಗೆ ಯಾಗುತ್ತದೆ ಎಂದು ನೋಡೋಣಾ ಎಂದು ಹೇಳಿದರು.

ನನಗೆ ಜವಬ್ದಾರಿ ಕೊಟ್ಟರೆ  ನಾನು ಜೆಡಿಎಸ್​​ ಶಾಸಕರನ್ನು ಕರೆದು ತರುತ್ತೇನೆ ಎಂದು ಹೇಳಿದ್ದೇನೆ ಆದರೆ ಈಗ ನನಗೆ ಅಂತಹ ಯಾವುದೇ ಜವಬ್ದಾರಿ ಇಲ್ಲ. ಆದರೆ ಒಕ್ಕಲಿಗರನ್ನು ಸ್ವಾರ್ಥಕ್ಕೆ ಬಳಸಿಕೊಂಡ ದೇವೇಗೌಡರ ಕುಟುಂಬವನ್ನು ಜನರು ತಿರಸ್ಕರಿಸಿದ್ದಾರೆ.  ಹಳ್ಳಿ ಹಳ್ಳಿಗೆ ಬಂದು ಪ್ರಚಾರ ಮಾಡಿದರು ಕೂಡ ಜನರು ದೇವೇಗೌಡರಿಗೆ ಬೆಂಬಲ ಕೊಟ್ಟಿಲ್ಲ. ಇದರಿಂದಲೆ ತಿಳಿಯುತ್ತೆ ಜನರು ಜೆಡಿಎಸ್​​ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments