Monday, January 27, 2025

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು : ದಂಪತಿಗಳು ಸಾ*ವು

ಚಿಕ್ಕೊಡಿ : ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ ಕಾಲುವೆಗೆ ಬಿದ್ದ ಪರಿಣಾಮ ದಂಪತಿಗಳು ಸಾವನ್ನತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸುಳಿ ಐನಪುರ ರಸ್ತೆಯಲ್ಲಿ ಸಂಭವಿಸಿದೆ.

ಕೊಲ್ಲಾಪುರ್ ಜಿಲ್ಲೆಯ ಕರವೀರ ತಾಲೂಕಿನ ಕೂಟೆರ ಗ್ರಾಮದ ಆದರ್ಶ ಯುವರಾಜ್ ಪಾಂಡವ್ (27), ಶಿವಾನಿ ಆದರ್ಶ್ ಪಾಂಡವ (20) ಮೃತಪಟ್ಟಿದ್ದಾರೆ. ಇನ್ನುಳಿದ ಐವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ದಂಪತಿಗಳು ತಮ್ಮ ಫೋರ್ಡ್ ಕಾರಿನಲ್ಲಿ ತಾಲೂಕಿನ ಐನಾಪುರದ ಸಂಬಂಧಿಕರ ‌ಮನೆ ಕಾರ್ಯಕ್ರಮಕ್ಕೆ ಬಂದಿದ್ದರು. ಮರಳಿ ಮನೆಗೆ ಹೋಗುವಾಗ ಮಂಗಸುಳಿ – ಐನಾಪುರ ರಸ್ತೆ ತಿರುವಿನಲ್ಲಿ‌ ಕಾರು ನಿಯಂತ್ರಣ ಯಪ್ಪಿ ಕಾಲುವೆಗೆ ಬಿದ್ದಿದೆ.

ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು ರೂಪಾಲಿ ಗಾಡೇಕರ್, ಕುನಾಲ್ ಗಾಡೇಕರ್, ರಾಜವೀರ ಪಾಂಡವ್, ಅನವಿ ಪಾಂಡವ್, ಪೂಜಾ ಬಾಮನೆ ಇವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ‌ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಪ್ರಶಾಂತ್ ಮುನ್ನೋಳ್ಳಿ, ಸಿಪಿಐ ಸಂತೋಷ್ ಹಳ್ಳೂರ್, ಪಿಎಸ್ಐ ಜಿ.ಜಿ. ಬಿರಾದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ತನಿಖೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES