Saturday, January 11, 2025

ವಿಜಯೇಂದ್ರ ರಾಜ್ಯಧ್ಯಕ್ಷ ಸ್ಥಾನಕ್ಕೆ ಕುತ್ತು: ಮತ್ತಷ್ಟು ಹೆಚ್ಚಾಗಲಿದೆಯ ಬಿಜೆಪಿ ಒಳಜಗಳ

ಬೆಂಗಳೂರು: ರಾಜ್ಯದಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೀನಮಾನವಾಗಿ ಸೋಲನುಭವಿಸಿದ್ದು. ಮೂರಕ್ಕೆ ಮೂರು ಕ್ಷೇತ್ರಗಳಲ್ಲಿ ಸೋಲುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಇದರ ಮಧ್ಯೆ ಬಿಜೆಪಿಯಲ್ಲಿ ರಾಜ್ಯಧ್ಯಕ್ಷ ಬದಲಾವಣೆಯ ಕೂಗು ಜೋರಾಗುವ ಸಾಧ್ಯತೆ ಇದ್ದು. ವಿಜಯೇಂದ್ರರನ್ನು ರಾಜ್ಯಧ್ಯಕ್ಷ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳುಬರುತ್ತಿವೆ.

ಈಗಾಗಲೇ ವಿಜಯೇಂದ್ರ ನಾಯಕತ್ವವನ್ನು ಬಿಜೆಪಿಯ ಕೆಲವು ನಾಯಕರು ಒಪ್ಪಿಕೊಳ್ಳದೆ ರಾಜ್ಯಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದ್ದು. ಬಸನಗೌಡ ಯತ್ನಾಳ್​, ರಮೇಶ್​ ಜಾರಕಿಹೋಳಿ, ಪ್ರತಾಪ್​ ಸಿಂಹ ಸೇರಿದಂತೆ ಅನೇಕ ಬಿಜೆಪಿ ನಾಯಕರು ವಿಜಯೇಂದ್ರರ ನಾಯಕತ್ವವನ್ನು ಒಪ್ಪಿಕೊಳ್ಳದೆ ತಿರಸ್ಕರಿಸಿದ್ದಾರೆ.

ಇದರ ನಡುವೆ ಈಗ ಬಂದಿರುವ ಉಪಚುನಾವಣೆಯ ಫಲಿತಾಂಶ ರಾಜ್ಯಧ್ಯಕ್ಷರ ಬದಲಾವಣೆಯ ಕೂಗಿಗೆ  ಮತ್ತಷ್ಟು ಬಲ ನೀಡಲಿದ್ದು. ಮೂರರಲ್ಲಿ ಒಂದು ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗದ ವಿಜಯೇಂದ್ರರನ್ನು ಬದಲಾಯಿಸಬೇಕು ಎಂಬ ಕೂಗು ಮತ್ತಷ್ಟು ಜೋರಾಗಲಿದೆ.

ಈಗಾಗಲೇ ಬಸನಗೌಡಪಾಟೀಲ್​ ಯತ್ನಳ್​, ವಿಜಯೇಂದ್ರ ಬಗ್ಗೆ ಬಹಿರಂಗವಾಗಿ ಅಸಮಧಾನ ಹೊರಹಾಕುತ್ತಿದ್ದು. ವಿಜಯೇಂದ್ರ ನಡೆಸುವ ಯಾವುದೇ ಕಾರ್ಯಕ್ರಮಗಳಿಗೆ  ಹಾಜರಾಗದೆ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿದ್ದಾರೆ, ವಕ್ಫ್​ ವಿವಾದದಲ್ಲಿಯು ಸಹ ಪ್ರತ್ಯೇಕವಾಗಿ ಹೋರಾಟ ಮಾಡುತ್ತಿದ್ದಾರೆ. ಉಪಚುನಾವಣೆಯಲ್ಲಿನ ಪ್ರಚಾರದಲ್ಲಿಯು ಭಾಗವಹಿಸದೆ ತಮ್ಮ ಅಸಮಧಾನವನ್ನು ಹೊರಹಾಕುತ್ತಿದ್ದು. ಇದರ ನಡುವೆ ರಾಜ್ಯದಲ್ಲಿ ನಡೆದ ಉಪಚುನಾವನೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದ್ದು ಇದರಿಂದಾಗಿ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಕೂಗು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

RELATED ARTICLES

Related Articles

TRENDING ARTICLES