Monday, December 23, 2024

ಗಾಂಜ ಗ್ಯಾಂಗ್​ ಅರೆಸ್ಟ್​​: ಸುಮಾರು 22 ಲಕ್ಷ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡ ಪೋಲಿಸರು

ವಿಜಯಪುರ : ಅಕ್ರಮವಾಗಿ ಗಾಂಜಾ ಸಂಗ್ರಹ ಮಾಡಿಟ್ಟುಕೊಂಡಿದ್ದ ಅಡ್ಡದ ಮೇಲೆ ಪೋಲಿಸರು ವಾಗ್ದಾಳಿ ನಡೆಸಿದ್ದು. ಸುಮಾರು 22 ಲಕ್ಷ ಮೌಲ್ಯದ 46 ಕೆಜಿ ಗಾಂಜವನ್ನು ಸಂಗ್ರಹ ಮಾಡಿಟ್ಟುಕೊಂಡಿದ್ದರು ಎಂದು ಮಾಹಿತಿ ದೊರೆತಿದೆ.

ವಿಜಯಪುರದ ಸಿಂದಗಿ ಕ್ರಾಸ್ ದಿಂದ ಬುರಣಾಪುರ ಹೋಗುವ ಮಾರ್ಗ ಮದ್ಯದಲ್ಲಿ ಗಾಂಜವನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಗಾಂಜ ಮಾರಾಟ ಮಾಡುವ ಉದ್ದೇಶದಿಂದ ಎರಡು ಕಾರ್​ನಲ್ಲಿ ಗಾಂಜವನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೋಲಿಸರು ಆರೋಪಿಗಳನ್ನು ವಶಕ್ಕೆ ಪಡೆದು. ಗಾಂಜವನ್ನು ಸೀಜ್​ ಮಾಡಿದ್ದಾರೆ.

ಸುಮಾರ 46 ಕೆಜಿ 676 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ದೊರೆತಿದ್ದು. ಅಂದಾಜು ಗಾಂಜಾ ಮೌಲ್ಯ 22 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.  ಪ್ರಕರಣದಲ್ಲಿ ಸಂತೋಷ ನಾಗಶೆಟ್ಟಿ ರಾಠೋಡ (35), ಸಂಜು ಕಿಶನ್ ರಾಠೋಡ (33) ಹಾಗೂ ಸಂತೋಷ ಧನಸಿಂಗ್ ರಾಠೋಡ (38) ಎಂಬಾತರ ಬಂಧಸಿದ್ದು.
ವಿಜಯಪುರದ ಸಿಇಎನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES