ದೆಹಲಿ : ದೆಹಲಿಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು. ಮುಂದಿನ ವರ್ಷ ಅಂದರೆ 2025ರ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ ಎಂದು ಮಾಹಿತಿ ದೊರೆತಿದೆ. ಆದರೆ ಆಮ್ ಆದ್ಮಿ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿದ್ದು. ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
2025ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮ ಪಕ್ಷ ತನ್ನ 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಇತ್ತೀಚೆಗೆ ಎಎಪಿ ಸೇರಿದ್ದ ಆರು ನಾಯಕರಿಗೆ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಬ್ರಹ್ಮಸಿಂಗ್ ತನ್ವಾರ್, ಬಿ.ಬಿ. ತ್ಯಾಗಿ, ಅನಿಲ್ ಝಾ ಬಿಜೆಪಿ ತೊರೆದು ಎಎಪಿ ಸೇರ್ಪಡೆಗೊಂಡರೆ, ಜುಬೇರ್ ಚೌಧರಿ, ವೀರ್ ಸಿಂಗ್ ದಿಂಗನ್ ಮತ್ತು ಸೋಮೇಶ್ ಶೋಕೀನ್ ಕಾಂಗ್ರೆಸ್ ತೊರೆದು ಎಎಪಿಗೆ ಸೇರ್ಪಡೆಗೊಂಡಿದ್ದರು.
ಉಳಿದಂತೆ ಪಕ್ಷದ ನಾಯಕರಾದ ರಾಮ್ ಸಿಂಗ್ ನೇತಾಜಿ, ಗೌರವ್ ಶರ್ಮಾ, ಮನೋಜ್ ತ್ಯಾಗಿ, ದೀಪಕ್ ಸಿಂಘಾಲ್ ಮತ್ತು ಸರಿತಾ ಸಿಂಗ್ ಅವರಿಗೆ ಟಿಕೆಟ್ ನೀಡಿದೆ. ಪಕ್ಷದ ಸಂಚಾಲಕ ಅರವಿಂದ ಕೇಜ್ರವಾಲ್ ನೇತೃತ್ವದಲ್ಲಿ ನಡೆದ ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯ ನಂತರ ಹೆಸರುಗಳನ್ನು ಪ್ರಕಟಿಸಲಾಗಿದೆ.
ಈ ಬಾರಿಯ ದೆಹಲಿ ಚುನಾವಣೆ ರಾಷ್ಟ್ರದ ಗಮನ ಸೆಳೆಯಲಿದ್ದು. ಪ್ರಸ್ತುತ ಸರ್ಕಾರದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅಬಕಾರಿ ಹಗರಣದಲ್ಲಿ ಜೈಲು ಸೇರಿ ಹೊರಬಂದಿದ್ದು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನವನ್ನು ಅಲಂಕರಿಸಿರುವ ಅತಿಶಿ ಮರ್ಲೆನಾ ಈ ಬಾರಿಯ ಚುನಾವಣೆಯನ್ನು ಗೆದ್ದು ಮತ್ತೆ ಅರವಿಂದ್ ಕೇಜ್ರೀವಾಲ್ರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹಠ ತೊಟ್ಟಿದ್ದಾರೆ.
ಮತ್ತೊಂದಡೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 7ಕ್ಕೆ 7 ಸ್ಥಾನಗಳನ್ನು ಕ್ಲೀನ್ಸ್ವೀಪ್ ಮಾಡುವ ಮೂಲಕ. ಈ ಬಾರಿ ದೆಹಲಿ ಗದ್ದುಗೆ ಹಿಡಿಯುವ ಕನಸನ್ನು ಕಂಡಿದೆ.