Sunday, December 22, 2024

ಹಿಂದೂಗಳನ್ನೆ ಟಾರ್ಗೆಟ್ ಮಾಡಿ BPL ಕಾರ್ಡ್ ರದ್ದು ಮಾಡುತ್ತಿದ್ದಾರೆ : ಯತ್ನಾಳ್​

ವಿಜಯಪುರ :  ರಾಜ್ಯದಲ್ಲಿ BPL ಕಾರ್ಡ್​ಗಳನ್ನು ರದ್ದು ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್​​ ‘ಹಿಂದೂಗಳನ್ನೆ ಟಾರ್ಗೆಟ್ ಮಾಡಿ BPL ಕಾರ್ಡ್ ರದ್ದು ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್​​ ಯತ್ನಾಳ್​ ‘ಹಿಂದೂಗಳ ರೇಶನ್ ಕಾರ್ಡ್​ಗಳನ್ನು ರಾಜ್ಯ ಸರ್ಕಾರ ರದ್ದು ಮಾಡುತ್ತಿದೆ. ಅಧಿವೇಶನದಲ್ಲಿ ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ. ಸಿದ್ದರಾಮಯ್ಯನೆ ಹೇಳಿದ್ದಾರೆ ಹಿಂದೂಗಳ ಓಟು ಬೇಡ ಎಂದಿದ್ದಾರೆ. ಹಿಂದೂಗಳ ರೇಶನ್ ಕಡಿತವಾಗ್ತಿದೆ ಎಂದು ನನಗೂ ಮಾಹಿತಿ ಬಂದಿದೆ.ಸಾಮಾಜಿಕ ಜಾಲತಾಣಗಳಲ್ಲು ಹಿಂದೂಗಳ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಪ್ರಸ್ತಾಪವಾಗ್ತಿದೆ. ಇದನ್ನ ಇಟ್ಟುಕೊಂಡು ಅಧಿವೇಶನದಲ್ಲಿ ಧರಣಿ ಮಾಡ್ತೇವೆ’ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಯತ್ನಾಳ್​ ‘ಹಿಂದೂಗಳಿಗೆ ರೇಶನ್ ಕಾರ್ಡ‌ನಲ್ಲಿ ಅನ್ಯಾಯವಾಗಬಾರದು ಕಾಂಗ್ರೆಸ್​ನವರು ಹಿಂದೂಗಳನ್ನ ಟಾರ್ಗೆಟ್ ಮಾಡ್ತಿದೆ. ಯಾರಿಗೆ ಅನ್ಯಾಯವಾಗಿದೆ ಅವರ ಪರ ಸದನದಲ್ಲಿ ಧ್ವನಿ ಎತ್ತುತ್ತೇವೆ. ಮೊದಲು ಮಾಹಿತಿ ಪಡೆಯುತ್ತೇವೆ, ಪ್ಯಾನ್ ಕಾರ್ಡ್ ಅಪ್ಲಿಕೇಶನ್ ಹಾಕಿದವರ ರೇಶನ್ ಕಾರ್ಡ್ ರದ್ದಾಗಿವೆ ಎಂದು ಮಾಹಿತಿ ದೊರೆತಿದೆ. ಓಟು ಹಾಕಿಲ್ಲ ಎಂದು ಹಿಂದೂಗಳನ್ನ ಟಾರ್ಗೆಟ್ ಮಾಡಲಾಗ್ತಿದೆ
ಹಿಂದೂಗಳನ್ನ ತುಳಿಯಬೇಕು ಎಂದು ಹೀಗೆ ಮಾಡ್ತಿದ್ದಾರೆ’ ಎಂದಯ ಶಾಸಕ ಯತ್ನಾಳ್ ರಾಜ್ಯ ಸರ್ಕಾರದ ಮೇಲೆ ವಾಗ್ದಾಲಿ ನಡೆಸಿದರು.

RELATED ARTICLES

Related Articles

TRENDING ARTICLES