Wednesday, January 22, 2025

ಮಾಜಿ ಲವರ್ ಪ್ರಭುದೇವ ಬಗ್ಗೆ ನಯನತಾರಾ ಸ್ಫೋಟಕ ಹೇಳಿಕೆ

ಸಿನಿಮಾ​: ವಿವಾದದ ನಡುವೆಯೇ ಲೇಡಿ ಸೂಪರ್​ ಸ್ಟಾರ್ ನಯನತಾರಾ ಅವರ ಜೀವನಾಧಾರಿತ ಸಾಕ್ಷ್ಯ ಚಿತ್ರ ‘ನಯನತಾರಾ : ಬಿಯಾಂಡ್ ದಿ ಫೇರಿ ಟೇಲ್’ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿದೆ. ನಿನ್ನೆ 39ನೇ ವಸಂತಕ್ಕೆ ಕಾಲಿಟ್ಟಿರುವ ನಯನತಾರಾಗೆ ಸಾಕ್ಷ್ಯ ಚಿತ್ರವು ಹುಟ್ಟು ಹಬ್ಬದ ಗಿಫ್ಟ್ ಆಗಿದೆ.

ಸಾಮಾನ್ಯ ಆ್ಯಂಕರ್ ಆಗಿ ವೃತ್ತಿ ಜೀವನ ಆರಂಭಿಸಿ ಸ್ಟಾರ್ ನಟಿ ಪಟ್ಟಕೇರುವುದರ ನಡುವೆ ನಯನತಾರಾ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಲವ್ ಲೈಫ್ನಲ್ಲೂ ಸಾಕಷ್ಟು ನೋವು ಅನುಭವಿಸಿದ್ದು , ಇದೆಲ್ಲವನ್ನು
ಸಾಕ್ಷ್ಯ ಚಿತ್ರ ದಲ್ಲಿ ವಿವರಿಸಲಾಗಿದೆ. ತಮ್ಮ ಮಾಜಿ ಲವರ್ ಬಗ್ಗೆ ನಯನತಾರಾ ಅವರು ಸಾಕ್ಷ್ಯಚಿತ್ರದಲ್ಲಿ ಮಾತನಾಡಿದ್ದಾರೆ. ಒಟ್ಟಿ ಗೆ ಬಾಳಲು ಬಯಸಿದರೆ ಸಿನಿಮಾಗಳನ್ನು ಬಿಡುವಂತೆ ತನ್ನ ಮಾಜಿ ಗೆಳೆಯ ಕೇಳಿಕೊಂಡಿದ್ದನ್ನು ಎಂದು ನಯನ ಹೇಳಿದ್ದಾರೆ.

ಆ ಮಾಜಿ ಗೆಳೆಯ ಬೇರೆಯಾರು ಇಲ್ಲ ಇಂಡಿಯನ್​ ಮೈಕಲ್ ಜಾಕ್ಸನ್ ಎಂದು ಖ್ಯಾತಿ ಪಡೆದಿರುವ ಪ್ರಭುದೇವ. ಆದರೆ,ನಯನತಾರಾ ಎಲ್ಲಿಯೂ ಪ್ರಭುದೇವ ಹೆಸರನ್ನು ಬಹಿರಂಗವಾಗಿ ಹೇಳಿಲ್ಲ . ಮದುವೆಯ ನಂತರ ಸಿನಿಮಾದಿಂದ ದೂರ ಉಳಿಯುವಂತೆ ಹೇಳಿದ್ದರು. ನಾನು ಕೂಡ ಸಿನಿ ಇಂಡಸ್ಟ್ರಿ ತೊರೆಯಲು ನಿರ್ಧರಿಸಿದೆ. ಏಕೆಂದರೆ, ನನಗೆ ಬೇರೆ ಆಯ್ಕೆಯೇ ಇರಲಿಲ್ಲ . ಮೊದಲ ಪ್ರೀತಿಯು ವಿಶ್ವಾಸಾರ್ಹ ಸಂಬಂಧವಾಗಿತ್ತು . ನಾನು ಅವನನ್ನು ಪ್ರೀತಿಸಿದಂತೆಯೇ ಆತನು ಕೂಡ ನನ್ನನ್ನು ಪ್ರೀತಿಸುತ್ತಾನೆ ಎಂಬ ನಂಬಿಕೆ ನನ್ನಲ್ಲಿತ್ತು . ಶ್ರೀ ರಾಮ ರಾಜ್ಯಂ ಚಿತ್ರೀಕರಣ ಮುಗಿದ ನಂತರ ನಾನು ತುಂಬಾ ಅಳುತ್ತಿದ್ದೆ . ನನ್ನ ಇಷ್ಟದ ವೃತ್ತಿಯನ್ನು ಬಿಟ್ಟು ಬಿಡಬೇಕೆನ್ನುವ ಚಿಂತೆಯಲ್ಲಿದ್ದೆ . ಆದರೆ, ನಾನೆಂದಿಗೂ ಚಲನಚಿತ್ರ ಗಳನ್ನು ಬಿಡುವ ಬಗ್ಗೆ ಯೋಚಿಸಿರಲಿಲ್ಲ
ಎಂದು ಹೇಳಿದ್ದಾರೆ.

2011 ರಲ್ಲಿ ತೆಲುಗು ಚಿತ್ರ ಶ್ರೀ ರಾಮ ರಾಜ್ಯಂ ಬಿಡುಗಡೆಯಾದ ನಂತರ ನಯನತಾರಾ ನಟನೆಯನ್ನು ತ್ಯ ಜಿಸಿ,
ಪ್ರಭುದೇವರನ್ನು ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಅದೇ ಸಮಯದಲ್ಲಿ ನಯನತಾರಾ ವಿರುದ್ಧ
ಪ್ರಭುದೇವ ಪತ್ನಿ ಹರಿಹಾಯ್ದಿದ್ದರು. ಅಲ್ಲದೆ, ಪ್ರಭುದೇವಗೆ ಡಿವೋರ್ಸ ಕೊಡಲು ನಿರಾಕರಿಸಿದ್ದರಿಂದ ಒತ್ತಡ
ಹೆಚ್ಚಾಗಿ, ಇಬ್ಬರು ಬೇರೆಯಾಗಬೇಕಾಯಿತು. ಈ ವಿಚಾರವನ್ನು ನಯನತಾರಾ ಸಾಕ್ಷ್ಯ ಚಿತ್ರ ದಲ್ಲಿ
ಬಹಿರಂಗಪಡಿಸಿದ್ದಾರೆ

RELATED ARTICLES

Related Articles

TRENDING ARTICLES