Monday, November 18, 2024

ಕಾರ್ತಿಕ ಮಾಸ ಹಿನ್ನಲೆ ಹೆಚ್ಚಾಯ್ತು ಹೂವಿನ ಬೆಲೆ

ಬೆಂಗಳೂರು : ಗೃಹಪ್ರವೇಶ, ಮದುವೆಗಳು ಆರಂಭವಾದ ಹಿನ್ನೆಲೆ ಹೂವಿನ ಬೆಲೆ ದಿನೇ ದಿನೆ ಹೆಚ್ಚಾಗುತ್ತಿದ್ದು. ಎಲ್ಲಾ ರೀತಿಯ ಹೂವಿನ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಕಾರ್ತಿಕ ಮಾಸದಲ್ಲಿ ಶುಭಕಾರ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವುದರಿಂದ ಈ ಸಮಯದಲ್ಲಿ ಹೂವು ಸೇರಿದಂತೆ ಕೆಲವು ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗುತ್ತವೆ. ಅದೇ ರೀತಿಯಾಗಿ ಈ ಬಾರೀ ಹೂವಿನ ಬೆಲೆಯಲ್ಲಿ ಭಾರೀ ಪ್ರಮಾಣದ ಹೆಚ್ಚಳವಾಗಿದ್ದು ದಿನದಿಂದ ದಿನಕ್ಕೆ ಹೂವಿನ ಬೆಲೆಯಲ್ಲಿ ಬಾರೀ ಏರಿಕೆ ಕಂಡುಬರುತ್ತಿದೆ.

ಹೂವಿನ ಹಾರದ ಬೆಲೆ 300ರಿಂದ ಶುರುವಾಗಿದ್ದು 3000ದವರೆಗೂ ಮಾರಾಟವಾಗುತ್ತಿದೆ ಎಂದು ಮಾಹಿತಿ ದೊರೆತಿದೆ. ನಿನ್ನೆ(ನ.17) 600ರೂ ಇದ್ದ ಮಲ್ಲಿಗೆ ಹೂವಿನ ಬೆಲೆ ಇಂದು 1.ಕೆ.ಜಿ 1000ರೂಪಾಯಿಗೆ ಮಾರಾಟವಾಗುತ್ತಿದೆ. ಸೇವಂತಿಗೆ ಹೂ ಕೆಜಿಗೆ  150ರೂ ಹೀಗೆ ಎಲ್ಲಾ ರೀತಿಯ ಹೂವಿನ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ ಎಂದು ಮಾಹಿತಿ ದೊರೆತಿದೆ. ಜನರು ಸಹ ಹೂವಿನ ಬೆಲೆಯಲ್ಲಿ ಎಷ್ಟೆ ಏರಿಕೆ ಕಂಡುಬಂದರು ಖರೀದಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES