Wednesday, January 22, 2025

ರಷ್ಯಾ ಅಧ್ಯಕ್ಷರನ್ನು ಟೀಕಿಸಿದ್ದ ಬ್ರಿಟನ್ ಬಾಣಸಿಗ ಸರ್ಬಿಯಾದಲ್ಲಿ ನಿಗೂಢ ಸಾವು

ವಿದೇಶ : ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ ವಿರುದ್ಧ ಟೀಕೆ ಮಾಡಿದ್ದ ಬ್ರಿಟನ್ ಮೂಲದ ಖ್ಯಾತ ಬಾಣಸಿಗ ಅಲೆಕ್ಸಿ ಜಿಮಿನ್ ಸರ್ಬಿಯಾದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಜಿಮಿನ್ ಅವರಿಗೆ 52 ವರ್ಷ ವಯಸ್ಸಾಗಿತ್ತು.

2014ರಲ್ಲಿ ರಷ್ಯಾ ತೊರೆದಿದ್ದ ಅವರು ಲಂಡನ್‌ನಲ್ಲಿ ಸ್ವಂತ ಹೊಟೇಲ್ ನಡೆಸುತ್ತಿದ್ದರು. ಹಾಗೂ ರಷ್ಯಾದ ಎನ್‌ಟಿವಿಯಲ್ಲಿ ಅಡುಗೆ ಕಾರ್ಯಕ್ರಮದ ನಿರೂಪರಾಗಿ ಕೆಲಸ ಮಾಡುತ್ತಿದ್ದರು. ರಷ್ಯಾ-ಉಕ್ರೇನ್ ಯುದ್ಧದ ವೇಳೆ ಪುಟಿನ್ ಅವರನ್ನು ಟೀಕೆ ಮಾಡಿ ಸಾಮಾಜಿಕ ಮಾಧ್ಯಗಳಲ್ಲಿ ಸರಣಿ ಪೋಸ್ಟ್‌ಗಳನ್ನು ಪ್ರಕಟಿಸಿದ್ದರು.

ಈ ಟೀಕೆ ಬಳಿಕ ಎನ್‌ಟಿವಿಯು ಜಿಮಿನ್ ಅವರ ಕಾರ್ಯಕ್ರಮವನ್ನು ರದ್ದುಪಡಿಸಿತ್ತು. ಜಿಮಿನ್ ಅವರು ತಮ್ಮ ನೂತನ ‘ಅಂಗ್ಲೋಮೇನಿಯಾ’ ಪುಸ್ತಕವನ್ನು ಪ್ರಚಾರ ಮಾಡಲು ಇತ್ತೀಚೆಗೆ ಸರ್ಬಿಯಾ ರಾಜಧಾನಿ ಬೆಲ್ಲೇಡ್‌ಗೆ ಪ್ರಯಾಣಿಸಿದ್ದರು. ಇಲ್ಲಿನ ಹೋಟೆಲ್ ಕೊಠಡಿಯಲ್ಲಿ ಜಿಮಿನ್ ಮೃತರಾಗಿರುವುದು ಕಂಡುಬಂದಿದೆ.

RELATED ARTICLES

Related Articles

TRENDING ARTICLES