Sunday, December 15, 2024

ಹೆಣ್ಣು ಮಕ್ಕಳ ವಿವಾಹದ ವಯಸ್ಸನ್ನು 9ವರ್ಷಕ್ಕೆ ಇಳಿಸಲು ಮುಂದಾದ ಸರ್ಕಾರ

ಇರಾಕ್​ : ತಾಲಿಬಾನ್​, ಇರಾನ್​ ಸೇರಿದಂತೆ ಕೆಲವು ರಾಷ್ಟ್ರಗಳು ಮಹಿಳೆಯರ ಮೇಲೆ ಕಠಿಣ ಕಾನೂನಿನ ನಿರ್ಬಂಧಗಳನ್ನು ವಿಧಿಸುವುದನ್ನು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ದೇಶ ಇಸ್ಲಾಂ ಕಾನೂನಿನ ನೆಪವೊಡ್ಡಿ ಹೆಣ್ಣು ಮಕ್ಕಳ ವಿವಾಹದ ವಯಸನ್ನು ಕೇವಲ 9 ವರ್ಷಕ್ಕೆ ಇಳಿಸಲು ಮುಂದಾಗಿದೆ.

ಹೌದು ಇರಾಕ್​ ಇಂತಹ ಭಯಾನಕ ಕಾನೂನನ್ನು ರೂಪಿಸಲು ಮುಂದಾಗಿದ್ದು. ಪುರುಷರು 9 ವರ್ಷದ ಹೆಣ್ಣನ್ನು ವಿವಾಹವಾಗುವಂತೆ ಕಾನೂನು ರೂಪಿಸುತ್ತಿದೆ ಎಂದು ಮಾಹಿತಿ ದೊರೆತಿದೆ. ಇದರ ಜೊತೆಗೆ ಮಹಿಳೆಯರ ವಿಚ್ಚೇದನದ ಹಕ್ಕು, ಮಕ್ಕಳ ಪಾಲನೆಯ ಹಕ್ಕು, ಸೇರಿದಂತೆ ಉತ್ತರಾಧಿಕಾರದ ಹಕ್ಕನ್ನು ಕಸಿದುಕೊಳ್ಳುವಂತೆ ಕಾನೂನು ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ಮಾಹಿತಿ ದೊರೆತಿದೆ.

ಕೆಲವೊಂದು ಇಸ್ಲಾಮಿಕ್​ ರಾಷ್ಟ್ರಗಳಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು. ಇದರ ಕುರಿತಂತೆ ವಿಶ್ವಸಂಸ್ಥೆಯಾಗಲಿ ಅಥವಾ ಮಾನವ ಹಕ್ಕುಗಳ ಆಯೋಗವಾಗಲಿ ಯಾವುದೇ ಕ್ರಮ ಕೈಗೊಳುತ್ತಿಲ್ಲ ಎಂಬುದು ನಿಜಕ್ಕು ಗಾಬರಿಯ ವಿಷಯವಾಗಿದೆ.

RELATED ARTICLES

Related Articles

TRENDING ARTICLES