Tuesday, December 24, 2024

ಅಂತರ್​ ಜಾತಿ ವಿವಾಹ : 6 ತಿಂಗಳ ಮಗುವಿನ ಕೊಲೆ

ಆನೇಕಲ್ : ನಗರದ ಹೊರವಲಯದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು.ತೊಟ್ಟಿಲಿನಲ್ಲಿದ್ದ ಮಗುವನ್ನು ಮನೆಯ ಮೇಲೆ ಇರುವ ಟ್ಯಾಂಕರ್​ನಲ್ಲಿ ಹಾಕಿ ಕೊಲೆ ಮಾಡಲಾಗಿದೆ. ಪ್ರಕರಣ ಸಂಬಂಧ ಸೂರ್ಯನಗರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಆನೇಕಲ್ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು ಕಳೆದ ಮೂರು ವರ್ಷಗಳ ಹಿಂದೆ ಮನು ಮತ್ತು ಅರ್ಚನ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಪರಸ್ಪರ ಅನ್ಯಜಾತಿಯವರಾಗಿದ್ದರು. ಇದರಿಂದ ಬೇಸರಗೊಂಡಿದ್ದ ಅರ್ಚನ ಮನೆಯವರು ಈ ಕೃತ್ಯ ಎಸಗಿದ್ದಾರೆ ಎಂದು ಅನುಮಾನ ವ್ಯಕಪಡಿಸಿದ್ದಾರೆ.

ನೆನ್ನೆ ಮಧ್ಯಾನ್ನ ಅರ್ಚನ ಗಂಡ ಮತ್ತು ಆತನ ಸಹೋದರ ಕೆಲಸಕ್ಕೆ ಹೋದಾಗ ಕೃತ್ಯ ನಡೆದಿದ್ದು. ಮಧ್ಯಾಹ್ನ ಸುಮಾರು 12 ಗಂಟೆಗೆ ಮಗು ನಾಪತ್ತೆಯಾಗಿದ್ದು. ಕುಟುಂಬ್ಥರು ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ.  ಆದರೆ ಮಗು ಎಲ್ಲು ಸಿಗದಿದ್ದ ಹಿನ್ನಲೆಯಲ್ಲಿ ಮನೆಯ ಮೇಲಿನ ಟ್ಯಾಂಕ್​ನಲ್ಲಿ ಹುಡುಕಿದಾಗ ಕೃತ್ಯ ಬೆಳಕಿಗೆ ಬಂದಿದೆ. ಮಗು ಕಳೆದುಕೊಂಡ ಕುಟುಂಬ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಪೋಲಿಸರು ಭೇಟಿ ನೀಡಿ ಪ್ರಕರಣ ದಾಕಲಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES