Tuesday, December 24, 2024

24 ಹೋಮ್​ಗಾರ್ಡ್​ ಬೋಧಕ ಹುದ್ದೆಗಳಿಗೆ 21,000 ಅಭ್ಯರ್ಥಿಗಳಿಂದ ಅರ್ಜಿ!

ಉತ್ತರಾಖಂಡ್: ಉತ್ತರಾಖಂಡದಲ್ಲಿ ನಿರುದ್ಯೋಗ ಬಿಕ್ಕಟ್ಟು ಉಲ್ಬಣಗೊಳ್ಳುತ್ತಲೇ ಇದೆ. ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಕೇವಲ 24 ಹೋಮ್ ಗಾರ್ಡ್ ಬೋಧಕ ಹುದ್ದೆಗಳಿಗೆ 21,000 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಸುಮಾರು 70% ಈ ಅರ್ಜಿದಾರರು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ ಎಂಬುದು ಆತಂಕಕಾರಿ ವಿಷಯವಾಗಿದೆ.

ಗೃಹರಕ್ಷಕ ಬೋಧಕರನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿರುವ ಇತ್ತೀಚಿನ ನೇಮಕಾತಿ ಅಭಿಯಾನ, ಕೇವಲ 12 ನೇ ತರಗತಿ ತೇರ್ಗಡೆಯ ಮಾನದಂಡವನ್ನು ಹೊಂದಿದೆ. ಆದರೆ ಸ್ನಾತಕೋತ್ತರ ಪದವೀಧರರೂ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿರುವುದು ಆಶ್ಚರ್ಯಕರ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ.

ಅರ್ಜಿದಾರರಲ್ಲಿ M.Tech, M.Sc., B.Sc., ಮತ್ತು ಇತರ ವಿವಿಧ ವಿಭಾಗಗಳ ಪದವೀಧರರು ಇದ್ದಾರೆ. ಗರ್ಹ್ವಾಲ್ ಒಂದೇ ಪ್ರದೆಶದಿಂದ 12,000 ಅರ್ಜಿಗಳು ಬಂದಿದ್ದು, ಕುಮಾನ್ ನಿಂದ 8,500 ಕ್ಕಿಂತ ಹೆಚ್ಚು ಅರ್ಜಿಗಳು ಬಂದಿವೆ. ಇದು ವಿರಳ ಉದ್ಯೋಗಾವಕಾಶಗಳಿಗಾಗಿ ಬೆಳೆಯುತ್ತಿರುವ ಹೋರಾಟದ ಪರಿಸ್ಥಿತಿಯನ್ನು ತೋರಿಸುತ್ತದೆ.

RELATED ARTICLES

Related Articles

TRENDING ARTICLES