Thursday, December 5, 2024

ಪಂಚಭೂತಗಳಲ್ಲಿ ಲೀನರಾದ ನಿರ್ದೇಶಕ ಗುರುಪ್ರಸಾದ್​ !

ಬೆಂಗಳೂರು : ಮಾದನಾಯಕನಹಳ್ಳಿಯ ತಮ್ಮ ಫ್ಲಾಟ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ನಟ, ನಿರ್ದೇಶಕ ಗುರುಪ್ರಸಾದ್​ ಅಂತ್ಯಕ್ರಿಯೆ ವಿಲ್ಸ್​ನ​ ಗಾರ್ಡನ್​ ಚಿತಾಗಾರದಲ್ಲಿ ನಡೆದಿದ್ದು. ಕರ್ನಾಟಕ ಚಿತ್ರರಂಗದ ಅಪ್ರತಿಮ ನಿರ್ದೇಶಕ ಗುರುಪ್ರಸಾದ್​ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ತಮ್ಮ ಮನೆಯಲ್ಲಿಯೆ ಆತ್ಮಹತ್ಯೆಗೆ ಶರಣಾಗಿದ್ದ ಗುರುಪ್ರಸಾದರ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನಲೆ ಅಕ್ಕ ಪಕ್ಕದ ಮನೆಯವರು ಪೋಲಿಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆದರಿಸಿ ಮನೆ ಬಳಿ ಬಂದು ಪರಿಶೀಲಿಸಿದ ಪೋಲಿಸರಿಗೆ ಗುರುಪ್ರಸಾದ್​ ಆತ್ಮಹತ್ಯೆಗೆ ಶರಣಾಗಿದ್ದು ತಿಳಿದಿತ್ತು. ಪೋಲಿಸರು ಮಹಜರು ಮಾಡಿದ ನಂತರ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಶವ ಪರೀಕ್ಷೆ ನಡೆಸಲಾಯಿತು.

ವಿಲ್ಸನ್​ ಗಾರ್ಡನ್​ ವಿಧ್ಯುತ್ತ ಚಿತಾಗಾರದಲ್ಲಿ ಸಂಜೆ 7 ಗಂಟೆ ವೇಳೆಗೆ ಬ್ರಾಹ್ಮಣ ಸಮುದಾಯದ ಪ್ರಕಾರ ಗುರುಪ್ರಸಾದ ಅವರ ಅಂತ್ಯಕ್ರಿಯೆ ನೆರವೇರಿತು. ಗುರುಪ್ರಸಾದ್ ಅವರ ಸಹೋದರ ಮತ್ತು​ ಎರಡನೇ ಹೆಂಡತಿಯ ಸಹೋದರ​ ಅಂತ್ಯಕ್ರಿಯೆ ನೆರವೇರಿಸಿದರು. ಈ ವೇಳೆ ಗುರಪ್ರಸಾದ ಅವರ ಮೊದಲನೆ ಹೆಂಡತಿ ಆರತಿ ಮತ್ತು ಮಗಳು ಹಾಜರಿದ್ದರು.

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ದುನಿಯಾ ವಿಜಯ್​, ಧನಂಜಯ್

ಗುರುಪ್ರಸಾದ್​ ಅವರು ಆತ್ಮಹತ್ಯೆ ಮಾಡಿಕೊಂಡು ಅನೇಕ ದಿನಗಳು ಕಳೆದ ಹಿನ್ನಲೆಯಲ್ಲಿ ಅವರ ಅಂತ್ಯಕ್ರಿಯೆಯನ್ನು ಬೇಗನೆ ಮಾಡಿಮುಗಿಸಲಾಯಿತು. ಇದರಿಂದಾಗಿ ಯಾರಿಗು ಅವರ ಅಂತಿಮ ದರ್ಶನ ಸಿಗಲಿಲ್ಲ. ಆದರೆ ನಟ ದುನಿಯಾ ವಿಜಯ್ , ಡಾಲಿ ಧನಂಜಯ್, ಸತೀಶ್​ ನಿನಾಸಂ​, ಯೋಗರಾಜ್​ ಭಟ್​​​ ಮತ್ತು ತಬಲಾ ನಾಣಿ ಸೇರಿದಂತೆ ಕೆಲವು ಸಿನಿಮಾ ಗಣ್ಯರು ಗುರುಪ್ರಸಾದ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.

 

RELATED ARTICLES

Related Articles

TRENDING ARTICLES