Thursday, December 5, 2024

ಗುರುಪ್ರಸಾದ್​ರೊಂದೊಗಿನ ಭಿನ್ನಾಭಿಪ್ರಯಾದ ಬಗ್ಗೆ ವಿವರಿಸಿದ ನಟ ಜಗ್ಗೇಶ್​

ಬೆಂಗಳೂರು : ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಗುರುಪ್ರಸಾದ್​ ಬಗ್ಗೆ ನಟ ಜಗ್ಗೇಶ್​ ಮಾತನಾಡಿದ್ದು. ತಮ್ಮಿಬ್ಬರ ಸ್ನೇಹದ ಬಗ್ಗೆ ವಿವರಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಜಗ್ಗೇಶ್ ರಂಗನಾಯಕ ಸಿನಿಮಾ ನಂತರ ನನ್ನ ಮತ್ತು ಗುರುಪ್ರಸಾದ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು, ಅದಾದ ಬಳಿಕ ನಾವಿಬ್ರು ಸಂಪರ್ಕದಲ್ಲಿರಲಿಲ್ಲ, ಕೆಲ ಕಾರ್ಯಕ್ರಮದಲ್ಲಿ ಭೇಟಿಯಾದಾಗ ಮಾತಾಡ್ತಿದ್ವಿ ಅಷ್ಟೇ ಎಂದು ಹೇಳಿದರು.

ಗುರುಪ್ರಸಾಧ್​ ಅವರ ಎರಡನೇ ಮದುವೆ ಸಂದರ್ಭದಲ್ಲಿ ತಿಳಿ ಹೇಳಿದ್ದೆ, ಸಿನಿಮಾದಲ್ಲಿ ನಟಿಸಲು ಬಂದಿದ್ದ ಹುಡುಗಿಜೊತೆ ಲಿವಿಂಗ್ ನಲ್ಲಿದ್ದ, ಅದಾದ ಮೇಲೆ ಮದುವೆ ಕೂಡ ಆದ್ರು, ಹೆಣ್ಣು ಮಗು ಕೂಡ ಇದೆ.ಆ ಮಗುವನ್ನ ನೆನೆಸಿಕೊಂಡ್ರೆ ಬೇಜಾರಾಗುತ್ತೆ, ಆ ಮಗುವಿಗೆ ನನ್ನ ಕಡೆಯಿಂದ ಸಹಾಯ ಮಾಡ್ತಿನಿ
ಮನುಷ್ಯನಿಗೆ ಮಾತಿನಲ್ಲಿ ನಿಗಾ ಇರಬೇಕು, ಕೆಲಸದಲ್ಲಿ ‌ಬದ್ದತೆ ಇರಬೇಕು. ಎರಡು‌ ಇಲ್ಲದಾಗ ಈ ರೀತಿ ಆಗುತ್ತೆ ಎಂದು ಹೇಳಿದರು

ಮುಂದುವರಿದು ಮಾತನಾಡಿದ ಜಗ್ಗೇಶ್​, ಅವನ ಅತಿಯಾದ ಕುಡಿತದ ಚಟ ಅವನನ್ನ ಸಾಲಗಾರನ್ನಾಗಿ ಮಾಡಿತ್ತು, ಅವನಿಗೆ ಬಂದ ಸಿನಿಮಾ ಹಣದಲ್ಲಿ ಒಳ್ಳೆಯ ಅದ್ಭುತ ಜೀವನ ಕಟ್ಟಿಕೊಳ್ಳಬಹುದಿತ್ತು
ಅದ್ರೆ ಅವನೇ ಬದುಕನ್ನ ಕೈಯಾರೆ ಹಾಳು ಮಾಡಿಕೊಂಡ. ಸಿನಿಮಾ ರಂಗಕ್ಕೆ ಅಧ್ಬುತವಾದ ಎರಡು‌ಸಿನಿಮಾ ಕೊಟ್ಟಿದ್ದಾರೆ. ಅದರ ಬಗ್ಗೆ ನನಗೆ ಹೆಮ್ಮೆಯಿದೆ ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

ಅವನ ಎರಡನೇ ಮದುವೆ ನಂತರ ಮೊದಲ ಹೆಂಡತಿ ಜೊತೆ ಚೆನ್ನಾಗಿರೋದಕ್ಕೆ ನಾನೇ ಹೇಳಿದ್ದೆ
ಮೊದಲನೇ ಹೆಂಡತಿ ಬೈಯ್ದರೂ ಕಾಲಿಗೆ ಬಿದ್ದಾದ್ರೂ ಅವಳ ಜೊತೆ ಮಾತಾಡು,ಚಪ್ಪಲಿಯಲ್ಲಿ ಹೊಡೆದ್ರೂ ಕೂಡ ಸಹಿಸ್ಕೋ ಅಂತ ನಾನೇ ಹೇಳಿದ್ದೆ, ಆದ್ರೆ ಅವನು ಹೆಂಡತಿ ಜೊತೆ ಮಾತೇ ಆಡಿಲ್ಲ, ಈಗ ಎರಡನೇ ಹೆಂಡತಿ ಪರಿಸ್ಥಿತಿ ನೋಡಿದ್ರೆ ಬೇಜಾರಾಗುತ್ತೆ,ಒಬ್ಬ ವ್ಯಕ್ತಿಗೆ ಗುರು ಇರಬೇಕು ಅವನ ಅಮ್ಮನನ್ನೇ ಗುರು ಅಂತ ಅನ್ಕೊಂಡಿದ್ದ ಆದ್ರೆ ಅಮ್ಮನನ್ನೇ ಕೆಟ್ಟ ಮಾತುಗಳಿಂದ ಬೈತಿದ್ದ, ಅದನ್ನ ನೋಡಿದಾಗಲೇ ನಮಗೆ ಬೇಜಾರಾಗ್ತಿತ್ತು,ಮನೆ ತುಂಬಾ ಡ್ರಿಂಕ್ಸ್ ಬ್ಲಾಟ್ಲಿಗಳೇ ಇರ್ತಿದ್ವು, ಕುಡಿತದ ಚಟದಿಂದ ಮಾತಿನಲ್ಲಿ ನಿಗಾ ಇರಲಿಲ್ಲ
ನಮ್ಮ ಜೊತೆಗೆ ಏನೇನೋ ಮಾತಾಡಿ ಕೊನೆಗೆ ಕ್ಷಮಿಸಿ ಅಂತಿದ್ದ ಎಂದು ಗುರುಪ್ರಸಾದ್​ ಬಗ್ಗೆ ಹೇಳಿದರು.

RELATED ARTICLES

Related Articles

TRENDING ARTICLES