Thursday, December 5, 2024

ಕನ್ನಡ ರಾಜ್ಯೋತ್ಸವದ ದಿನವೇ ಪ್ರತ್ಯೇಕ ರಾಜ್ಯದ ಕೂಗು !

ಕಲಬುರಗಿ :  ಕರ್ನಾಟಕ ರಾಜ್ಯೋತ್ಸವ ದಿನವೇ ರಾಜ್ಯದಲ್ಲಿ ಪ್ರತ್ಯೇಖ ರಾಜ್ಯದ ಕೂಗು ಕೇಳಿಬಂದಿದ್ದು. ಕರ್ನಾಟಕದ ಗಡಿಜಿಲ್ಲೆ ಕಲಬರಗಿಯಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ವತಿಯಿಂದ ಪ್ರತ್ಯೇಕ ಧ್ವಜಾರೋಹಣ ಮಾಡಲಾಗಿದೆ.

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ವತಿಯಿಂದ ಪ್ರತ್ಯೇಕ ಧ್ವಜಾರೋಹಣ ಮಾಡಲಾಗಿದ್ದು.
ಬೆಳಗ್ಗೆ 7.30 ಕ್ಕೆ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ಧ್ವಜಾರೋಹಣ ಮಾಡಿದ್ದಾರೆ. ಈ ಸಮಿತಿ ಅಧ್ಯಕ್ಷ ಎಮ್‌ಎಸ್ ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಲಾಗಿದ್ದು. ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇಂದ್ರ ಹಾಗೂ ರಾಜ್ಯದಿಂದ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡಲಾಗಿದೆ ಎಂದು ತಿಳಿದುಬಂದಿದೆ.

ಪ್ರತ್ಯೇಕ ಧ್ವಜಾರೋಹಣ ನಡೆಸಲು ಮುಂದಾಗಿದ್ದ ಸುಮಾರು 15ಕ್ಕೂ ಹೆಚ್ಚು ಜನರನ್ನು ಪೋಲಿಸರು ವಶಕ್ಕೆ ಪಡೆದಿದ್ದು. ಎಲ್ಲರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES