Tuesday, November 12, 2024

ಅಪ್ಪು ಸಮಾಧಿಗೆ ಭೇಟಿ ಕೊಟ್ಟು ಅನ್ನದಾನ ಮಾಡಿದ ಬಿಗ್​​ಬಾಸ್​ ಖ್ಯಾತಿಯ ಸಂಗೀತ ಶೃಂಗೇರಿ

ಬೆಂಗಳೂರು : ಬಿಗ್​ ಬಾಸ್​ ಸೀಸನ್​ ಖ್ಯಾತಿಯ ಶೃಂಗೇರಿ ಕರ್ನಾಟಕ ರತ್ನ ಪುನೀತ್​ ರಾಜ್​ ಕುಮಾರ್​ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಪ್ಪು ಅಭಿಮಾನಿಯಾಗಿರುವ ಸಂಗೀತ ಪುನೀತ್​ ರಾಜ್​ಕುಮಾರ್​​ ಅವರ ಸ್ಮಾರಕದ ಬಳಿ ಅನ್ನದಾನ ಮಾಡಿದರು.

ಬಿಗ್​ಬಾಸ್​ನಲ್ಲಿ ಕರ್ನಾಟಕ ಕ್ರಷ್​, ಸಿಂಹಿಣಿ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಸಂಗೀತ ಒಂದೆಲ್ಲಾ ಒಂದು ವಿಶಯಕ್ಕೆ ಸಾಮಾಜಿಕ ಜಾಲತಾಣಲ್ಲಿ ಸಕ್ರಿಯರಾಗಿರುತ್ತಾರೆ. ಪ್ರವಾಸದ ಪೋಟೋಗಳನ್ನು ಹಂಚಿಕೊಂಡು, ಯೋಗಾಸನ, ಮೆಡಿಟೇಶನ್​ಗೆ ಸಂಬಂಧಿಸಿದ ವಿಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುತ್ತಾರೆ. ಅದೇ ರೀತಿ ಅಪ್ಪು ಅವರ 3ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಗೀತ ಪುನೀತ್​ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಅನ್ನ ಸಂತರ್ಪಣೆ ಮಾಡಿದ್ದು ಅದರ ಪೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಪ್ಪು ಸಮಾಧಿಗೆ ಭೇಟಿ ನೀಡಿದ ಸಂಗೀತ ಪೋಟೋಗಳನ್ನು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು. ಸಂಗೀತ ನೋಡುತ್ತಿದ್ದಂತೆ ಜನರು ಅವರೊಡನೆ ಪೋಟೋಗಾಗಿ ಮುಗಿಬಿದ್ದಿದ್ದಾರೆ. ಅಷ್ಟೆ ಅಲ್ಲದೆ ಸಂಗೀತಾರಿಂದ ಇಂತಹ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಆರೈಸಿದ್ದಾರೆ.

RELATED ARTICLES

Related Articles

TRENDING ARTICLES