Wednesday, January 22, 2025

ಮಗನ ಹುಟ್ಟುಹಬ್ಬಕ್ಕೆ ಸಖತ್​ ಸ್ಟೆಪ್ಸ್​​ ಹಾಕಿದ ರಾಕಿಂಗ್​ ಸ್ಟಾರ್​

ಬೆಂಗಳೂರು : ರಾಕಿ ಬಾಯ್​ ಎಂದೇ ಚಿತ್ರರಂಗದಲ್ಲಿ ತಮ್ಮ ಚಾಪು ಮೂಡಿಸಿರುವ ರಾಕಿಂಗ್​ ಸ್ಟಾರ್​ ಯಶ್​ ತಮ್ಮ ವೈಯಕ್ತಿಕ ಜೀವನವನ್ನು ಆದಷ್ಟು ಗುಟ್ಟಾಗಿ ಇಟ್ಟಿದ್ದಾರೆ. ಕೆಲವೊಂದು ಹಬ್ಬ ಹರಿದಿನದಂದು ತಮ್ಮ ಕುಟುಂಬದೊಂದಿಗಿನ ಪೋಟೊಗಳನ್ನು ಹಂಚಿಕೊಂಡಿದ್ದನ್ನು ಬಿಟ್ಟರೆ. ಸೋಶಿಯಲ್​​ ಮೀಡಿಯಾದಲ್ಲಿಯೂ ಹೆಚ್ಚು ಸಕ್ರಿಯರಾಗಿರುವುದಿಲ್ಲ. ಆದರೆ ನಟ ಯಶ್​ ತಮ್ಮ ಮಗ ಅಥರ್ವ್​ನ ಹುಟ್ಟುಹಬ್ಬಕ್ಕೆ ಸಖತ್​ ಸ್ಟಪ್ಸ್​ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದೇ ಅಕ್ಟೋಬರ್​ 30ರಂದು ನಟ ಯಶ್​ ಮಗ ಯಥರ್ವ ಹುಟ್ಟುಹಬ್ಬ ಹಿನ್ನಲೆ ರಾಕಿ ಬಾಯ್​ ಶಿವಣ್ಣನ ಟಗರು ಸಿನಿಮಾದ ಹಾಡಿಗೆ ಡ್ಯಾನ್ಸ್​ ಮಾಡಿದ್ದು.ಇವರಿಗೆ ಇವರ ಪತ್ನಿ ರಾಧಿಕ ಪಂಡಿತ್​ ಕೂಡ ಸಾಥ್​ ನೀಡಿದ್ದಾರೆ. ವಿಡಿಯೋ ಸಕತ್​ ವೈರಲ್​ ಆಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ವಿಕ್ಷಣೇ ಪಡೆಯುತ್ತಿದೆ.

RELATED ARTICLES

Related Articles

TRENDING ARTICLES