Monday, December 23, 2024

2025ರಲ್ಲಿ ದರ್ಶನ್​ ರಾಜಕೀಯಕ್ಕೆ ಎಂಟ್ರಿ : ಅಚ್ಚರಿಯ ಭವಿಷ್ಯ ನುಡಿದ ಅವಧೂತ ಅರ್ಜುನ್​ ಗುರೂಜಿ

ಮೈಸೂರು: ನಟ ದರ್ಶನ್ ಬೇಲ್ ವಿಚಾರವಾಗಿ ಇಂದು ಮೈಸೂರಿನಲ್ಲಿ ಅವದೂತ ಅರ್ಜುನ್ ಗುರೂಜಿ ಸುದ್ದಿಗೋಷ್ಠಿ ಮಾಡಿ ದರ್ಶನ್​ ಬಿಡುಗಡೆಯಾಗುವ ವಿಷಯವನ್ನು ಮೊದಲೆ ದರ್ಶನ್​ ತಮ್ಮ ದಿನಕರ್​ಗೆ ತಿಳಿಸಿದ್ದೆ. ಅವರಿಗೆ 2025ರಲ್ಲಿ ಒಳ್ಳೆಯ ದಿನಗಳು ಬರಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

ದರ್ಶನ್​ ಬಗ್ಗೆ ಕೇಳಿದಾಗ ನಾನು ಅ.20 ನಂತರ ನೋಡಿ ಎಂದು ದರ್ಶನ್ ಬಗ್ಗೆ ಭವಿಷ್ಯ ನುಡಿದ್ದಿದ್ದೆ ಎಂದು ಹೇಳಿದ  ಅವದೂತ ಅರ್ಜುನ್ ಗುರೂಜಿ. ಮುಂದಿನ ದಿನಗಳಲ್ಲಿ ದರ್ಶನ್​ಗೆ ಒಳ್ಳೆ ಭವಿಷ್ಯ ಇದೆ, 2024 ಕಳೆದು 2025 ರಲ್ಲಿ ದರ್ಶನ್ ಗೆ ಒಳ್ಳೆಯ ದಿನಗಳು ಬರಲಿವೆ. ಮುಂದಿನ ದಿನಗಳಲ್ಲಿ ಚಿತ್ರದಲ್ಲೂ ಕೂಡ ನಟಿಸುತ್ತಾರೆ. ಅವರು ಹೊರಬರಲು ಪ್ರಾರ್ಥಿಸಿದ ದರ್ಶನ್ ಅಭಿಮಾನಿಗಳು, ಅವರ ಪತ್ನಿ, ತಮ್ಮನ ಪೂಜೆಗಳು ಫಲಿಸಿವೆ ಎಂದು ಹೇಳಿದರು.

ಸಧ್ಯಕ್ಕೆ  ಈಗ ದರ್ಶನ್​ಗೆ  ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ದರ್ಶನ್​ಗೆ ಯಾವುದೇ ಸ್ತ್ರೀ ದೋಷ ಇಲ್ಲ. ಅದೆಲ್ಲ ಸುಳ್ಳು ಎಂದು ಹೇಳಿದ ಗುರೂಜಿ. ಕೆಲವೊಂದು ಕೆಟ್ಟ ಸಮಯ, ಕೆಟ್ಟ ನಿರ್ಧಾರಗಳಿಂದ ಈ ರೀತಿಯಾಗಿದೆ. ಕನ್ನಡಿಗರಿಗೆ ದರ್ಶನ್ ಮೇಲೆ ಪ್ರೀತಿ ಇದೆ,  ಅನೇಕರಿಗೆ ದರ್ಶನ್ ಸಹಾಯ ಮಾಡಿದ್ದಾರೆ ಮತ್ತು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಸೇವೆ ಸಲ್ಲಿಸಿದ್ದಾರೆ ಆದ್ದರಿಂದ ಅವರಿಗೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ದರ್ಶನ್ ಬಗ್ಗೆ ಅವರ ತಾಯಿ ನಿರ್ಲ್ಯಕ್ಷ ಮಾಡಿಲ್ಲ ಮಾಡಿದ್ದಾರೆ ಎಂದು ಕೆಲವರು ದೂರುತ್ತಾರೆ ಆದರೆ ಅದನ್ನು ಯಾರೂ ನೋಡಿಲ್ಲ.ದರ್ಶನ್ ಕುಟುಂಬದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ಆ ತಾಯಿ ಮಕ್ಕಳನ್ನು ಕೈಬಿಡಲ್ಲ ಎಂದು ಹೇಳಿದರು.

ಕನ್ನಡ ಚಿತ್ರರಂಗದ ಬಗ್ಗೆಯೂ ಗುರೂಜಿ ಮಾತು

ಕನ್ನಡ ಚಿತ್ರರಂಗಕ್ಕೂ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರತ್ತೆ. ಎಲ್ಲರೂ ಕೂಡ ಕನ್ನಡ ಚಿತ್ರರಂಗದ ಕಡೆ ಮತ್ತೆ ತಿರುಗಿ ನೋಡುವಂತೆ ಆಗತ್ತೆ. ಕಲ್ಲಿಗೆ ಏಟು ಬಿದ್ದು ವಿಗ್ರಹ ಆಗಿದೆ, ದರ್ಶನ್ ಕೂಡ ಅಷ್ಟೇ ಈಗ ಅವರಿಗೆ ಸಾಕಷ್ಟು ಏಟು ಬಿದ್ದಿದೆ. ವಿಗ್ರಹ ಆಗಿ ಹೊರ ಬಂದಿದ್ದಾರೆ ಅವರಿಗೆ ಪೂಜೆಯು ಸಹ ಆಗತ್ತೆ ಎಂದು ಹೇಳಿದರು.

ಮುಂದುವರಿದು ಮಾತನಡಿದ ಗುರೂಜಿ ಯಾರನ್ನೂ ಯಾರು ದ್ವೇಷ ಮಾಡಬೇಡಿ, ನಾನು ನಾನು ಎಂದು ಮೆರೆಯಬೇಡಿ. ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡಿ ಕನ್ನಡ ಬೆಳೆಸಿ ನೀವು ಬೆಳೆಯಿರಿ ಎಂದು ಯುವ ನಟರಿಗೆ ಗುರೂಜಿ ಕರೆ ನೀಡದರು.

ದರ್ಶನ್​ ರಾಜಕೀಯ ಭವಿಷ್ಯದ ಬಗ್ಗೆ ಗುರೂಜಿ ಮಾತು

ದರ್ಶನ್ ರಾಜಕೀಯಕ್ಕೂ ಬರ್ತಾರೆ ಎಂದು ಹೇಳಿದ ಗುರೂಜಿ, ಮುಂದಿನ ದಿನಗಳಲ್ಲಿ ದರ್ಶನ್​ಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ, ರಾಜಕೀಯ ಪಕ್ಷಗಳೇ ಅವರ ಬಳಿ ಹೋಗ್ತವೆ ಎಂದು ಭವಿಷ್ಯ ನುಡಿದರು.

ನೆನ್ನೆ ದರ್ಶನ್ ತಮ್ಮ ದಿನಕರ್ ಕರೆ ಮಾಡಿದ್ದರು, ಬೇಲ್ ಸಿಗುವ ಮುನ್ನ ಏನಾಗತ್ತೆ  ಎಂದು ಕೇಳಿದ್ದರು. ಅದಕ್ಕೆ ನಾನು  ಸಂಜೆ ಸ್ವೀಟ್ ತೆಗೆದುಕೊಂಡು ಬನ್ನಿ ಎಂದಿದ್ದೆ ಎಂದು ಮಾರ್ಮಿಕವಾಗು ದರ್ಶನ್​ ರಿಲೀಸ್​ ಆಗುವ ಬಗ್ಗೆ ಮೊದಲೆ ತಿಳಿದಿತ್ತು ಎಂದು  ಮೈಸೂರಿನಲ್ಲಿ ಅವಧೂತ ಅರ್ಜುನ್ ಗುರೂಜಿ ಹೇಳಿಕೆ ನೀಡಿದರು.

RELATED ARTICLES

Related Articles

TRENDING ARTICLES