Thursday, January 2, 2025

ನಾನು ಶುದ್ಧ ಹಿಂದೂಸ್ತಾನಿ ಇಂಡಿಯನ್, 24 ಕ್ಯಾರೆಟ್ ಗೋಲ್ಡ್ ಎಂದು ಬೆನ್ನು ತಟ್ಟಿಕೊಂಡ ಜಮೀರ್​

ಹುಬ್ಬಳ್ಳಿ : ಬಳ್ಳಾರಿಯಲ್ಲಿ ಸಿ.ಟಿ ರವಿಯವರು ಮಾತನಾಡಿ ಜಮೀರ್​ ಅಹಮದ್​ರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂದು ಹೇಳಿಕೆ ನೀಡಿದ ವಿಚಾರಕ್ಕೆ ಮಾತನಾಡಿದ ಜಮೀರ್​ ಅಹಮದ್​ ಖಾನ್​ ಪ್ರಹ್ಲಾದ್​ ಜೋಶಿ ಅವರ ವಿರುಧ್ದ ವಾಗ್ದಾಳಿ ನಡೆಸಿದರು.

ಸಂಪುಟದಿಂದ ಜಮೀರ್ ಅಹ್ಮದ್ ರನ್ನ ಕಿತ್ತೊಗೆಯ ಬೇಕು ಎಂದಿದ್ದ ಜೋಶಿಗೆ ಜಮೀರ್​ ಟಾಂಗ್​​ ನೀಡಿದರು.
ನಾನು ಭಾರತೀಯ, ನನ್ನನ್ನ ಹೇಗೆ ಕಿತ್ತಾಕ್ತಾರೆ, ಜೋಶಿ ಅವರಿಗೆ ಹಿಂದೂ ಮುಸ್ಲಿಂ ಬಿಟ್ಟರೆ  ಮಾತನಾಡಲು ಏನು ಇಲ್ಲ, ಬಿಜೆಪಿಗೆ ಮುಸಲ್ಮಾನ್​ರು ಮತ ನೀಡಲ್ಲ ಅಂತ ಬಿಜೆಪಿ ಅವರು ದ್ವೇಷ ಮಾಡ್ತಾರೆ,ಅವರಿಗೆ ಮತ ಕೊಟ್ರೆ ಮುಸಲ್ಮಾನರು ಒಳ್ಳೆಯವರು ಎಂದು ಜಮೀರ್​ ಜೋಶಿ ಅವರ ಹೇಳಿಕೆಗೆ ಟಾಂಗ್​ ನೀಡಿದರು.

ಮುಂದುವರಿದು ಮಾತನಾಡಿದ ಸಚಿವ ಜಮೀರ್ ನಾನು ಯಾವತ್ತು ಕೋಮುದ್ವೇಷ ಹರಡಿಸುವಂತ ಕೆಲಸ ಮಾಡಿಲ್ಲ, ನಾನು ಶುದ್ಧ ಹಿಂದೂಸ್ತಾನಿ ಇಂಡಿಯನ್, 24 ಕ್ಯಾರೆಟ್ ಗೋಲ್ಡ್, ಬಿಜೆಪಿಯವರು ಚುನಾವಣೆ ಬರ್ತಾ ಇರೋದ್ರಿಂದ ಹೀಗೆಲ್ಲಾ ಮಾಡ್ತಾ ಇದ್ದಾರೆ, ಇದು ಬಿಜೆಪಿ ಕಾಲದಿಂದಲೂ ನಡೀತಾ ಇತ್ತು, ಕಾನೂನು ಅಂತ ಇಲ್ವಾ, ಯಾರ ಆಸ್ತಿನು ಯಾರು ತೆಗೆದುಕೊಳ್ಳಲು ಸಾಧ್ಯವಿಲ್ಲ, ನಾನು ಹೇಳಿದಕೂಡಲೇ ನಿಮ್ಮ ಆಸ್ತಿಯನ್ನ ವಕ್ಫ್​ ಆಸ್ತಿ ಮಾಡೋಕೆ ಆಗುತ್ತಾ? ಎಂಕ್ರೋಜ್ಮೆಂಟ್ ಗಾಗಿ ನಾವು ಮಾಡ್ತಾ ಇದ್ದೇವೆ
ವಕ್ಫ್​ ಕೈಯಲ್ಲಿ 23 ಸಾವಿರ ಎಕರೆ ಇದೆ, ಮಿಕ್ಕ 84 ಸಾವಿರ ಎಕರೆ ಎಂಕ್ರೋಜ್ಮೆಂಟ್ ಆಗಿದೆ ಎಂದು ಹೇಳಿದರು.

ವಿಜಯಪುರದಲ್ಲಿ ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ

ಬಿಜೆಪಿಯವರು ರೈತರನ್ನ ಎತ್ತಿ ಕಟ್ಟುತ್ತಿದ್ದಾರೆ, ನಾನು ವಕ್ಫ್​ ಸಚಿವನಾಗಿ ಹೇಳ್ತೇನೆ ಯಾವ ರೈತರಿಗೂ ತೊಂದರೆ ಆಗಲ್ಲ ಬಿಜೆಪಿ ಅವರು ಹೋಗ್ತಾ ಇದ್ದಾರೆ, ಅವರಿಗೆ ಕೇಳಿದ್ದೆಲ್ಲ ದಾಖಲೆ ಕೊಡಿ ಅಂತ ಎಂ ಬಿ ಪಾಟೀಲ್ ಹೇಳ್ತಿದ್ದಾರೆ, ಚುನಾವಣೆ ಇರೋದಕ್ಕಾಗಿ ಬಿಜೆಪಿ ಅವರು ಹೀಗೆಲ್ಲಾ ಮಾಡ್ತಿದ್ದಾರೆ. ಭಾರತದಲ್ಲಿರೋರೆಲ್ಲ ಭಾರತೀಯರು ಅಷ್ಟೇ, ಜೋಶಿ ಅವರೇ ರಾಜಕೀಯಕ್ಕೆ ಬಂದ ಮೇಲೆ ಜಾತಿ ಮಾಡಬಾರದು, ಎಂದು ಹೇಳಿದರು.

RELATED ARTICLES

Related Articles

TRENDING ARTICLES