Thursday, December 5, 2024

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ : ಮತ್ತೆ ಮುಳುಗುತ್ತಾ ರಾಜಧಾನಿ?

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳೆದ  ಕೆಲವು ದಿನಗಳಿಂದ ಬಿಡುವು ನೀಡಿದ್ದ ವರುಣ ಇಂದು (ಅ.30) ಮಧ್ಯಾಹ್ನದಿಂದ ಮತ್ತೆ ಅಬ್ಬರಿಸುತ್ತಿದ್ದು. ಮಳೆಯ ಹೊಡೆತಕ್ಕೆ ರಸ್ತೆಗಳೆಲ್ಲೆ ನೀರಿನಿಂದ ತುಂಬಿಕೊಂಡಿವೆ.

ಯಶವಂತಪುರ , ಮಲ್ಲೇಶ್ವರಂ, ಮತ್ತಿಕೆರೆ, ಕೆ ಆರ್ ಮಾರ್ಕೆಟ್ , ಮಲ್ಲೇಶ್ವರ, ಶೇಷಾದ್ರಿಪುರಂ, ಯಶವಂತ ಪುರ,
ರೇಸ್ ಕೋರ್ಸ್, ಮತ್ತಿಕೆರೆ,ವಿದ್ಯಾರಣ್ಯ ಪುರ, ರಾಜಾಜಿನಗರ, ನವರಂಗ, ಶ್ರೀರಾಮಪುರ ಸೇರಿದಂತೆ ಬೆಂಗಳೂರಿನ ಹಲವೆಡೆ ಬಾರೀ ಮಳೆಯಾಗುತ್ತಿದ್ದು. ಮುಂದಿನ 5 ದಿನಗಳ ಕಾಲ  ರಾಜ್ಯದಲ್ಲಿ ಬಾರೀ ಮಳೆಯಾಗಲಿದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಿಗೆ ಅಕ್ಟೋಬರ್​​ 31 ರಿಂದ ನವೆಂಬರ್​ 2ರವರೆಗೆ ಭಾರಿ ಮಳೆಯಾಗುವ ನಿರೀಕ್ಷೆಯಲ್ಲಿದ್ದು. ಉಳಿದ ಎರಡು ದಿನ ಸಾಧಾರಣ ಮಳೆಯಾಗುತ್ತದೆ ಎಂದು ಮಾಹಿತಿ ದೊರೆತಿದೆ.

ನಾಳೆ (ಅ.31) ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ. ನವೆಂಬರ್​ 1 ಮತ್ತು2 ರಂದು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಮಾಹಿತಿ ದೊರಕಿದ್ದು. ಮಳೆ ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ಚಳಿಯು ಇರಲಿದೆ ಎಂದು ಮಾಹಿತಿ ದೊರಕಿದೆ.

RELATED ARTICLES

Related Articles

TRENDING ARTICLES