Thursday, December 5, 2024

ಬಿಮ್ಸ್​ ಆಸ್ಪತ್ರೆ ಅವ್ಯವಸ್ಥೆ ಕಂಡು ಕಿಡಿಕಾರಿದ ಸಚಿವ ಈಶ್ವರ್​ ಖಂಡ್ರೆ

ಬೀದರ್ : ಬೀದರ್ ಜಿಲ್ಲಾ ಬ್ರಿಮ್ಸ್ ಆಸ್ಪತ್ರೆಗೆ ಸಚಿವ ಶರಣಪ್ರಕಾಶ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆಯ ಅವ್ಯವಸ್ಥೆ ಕಂಡ ಸಚಿವರು ಆಸ್ಪತ್ರೆ ಆಡಳಿತ ಮಂಡಳಿಯ ಮೇಲೆ ಗರಂ ಆದರು.

ಬ್ರಿಮ್ಸ್ ಆಸ್ಪತ್ರೆಯ ನೆಲಮಹಡಿ ಪರಿಶೀಲಿಸಿದ ಸಚಿವ ಶರಣಪ್ರಕಾಶ ಪಾಟೀಲ್ ಹಾಗೂ ಸಚಿವರು.
ನೀರು ಸೋರಿಕೆ ಕಂಡು ಕಿಡಿಕಾರಿದರು. ಕಟ್ಟಡದ ಕಳಪೆ ಕಾಮಗಾರಿ ಆಗಿದೆ ಎಂದು ಶರಣಪ್ರಕಾಶ ಪಾಟೀಲ್‌ಗೆ ಮಾಹಿತಿ ನೀಡಿದ ಸಚಿವ ಖಂಡ್ರೆ. ಶೌಚಾಲಯಗಳಲ್ಲಿ ಚಿಕ್ಕ ಪೈಪ್‌ಗಳನ್ನ ಹಾಕಿದ್ದಕ್ಕೆ ಸೋರಿಕೆ ಆಗ್ತಿದೆ ಎಂದು ಖಂಡ್ರೆ ಮಾಹಿತಿ ನೀಡಿದರು. ಕಟ್ಟಡ ಕಟ್ಟಿ ಕೇವಲ ಏಳು ವರ್ಷಗಳಲ್ಲೆ ಕಟ್ಟಡದಲ್ಲಿ ನೀರು ಬರ್ತಿದೆ ಅಂದ್ರೆ ಇದು ಕಳಪೆ ಕಾಮಗಾರಿ ಎಂದು ಶರಣಪ್ರಕಾಶ ಪಾಟೀಲ್ ಅಸಮಧಾನ ವ್ಯಕ್ತಪಡಿಸಿದರು.

ಭೇಟಿ ವೇಳೆ ರೋಗಿಗಳ ಸಮಸ್ಯೆ ಆಲಿಸಿದ ಸಚಿವರು. ಸಹೋದರನ ಕಳದುಕೊಂಡು ಕಣ್ಣೀರು ಹಾಕುತ್ತಿದ್ದವನಿಗೆ ಸಾಂತ್ವನ ಹೇಳಿದರು. ಸಹೋದರನ ಕಳೆದುಕೊಂಡು ಬಿಕ್ಕಿ ಬಿಕ್ಕಿ ಆಳುತ್ತಿದ್ದ ಸಂತಪೂರ್ ಮೂಲದ ವ್ಯಕ್ತಿಗೆ ಸಾಂತ್ವಾನ ಹೇಳಿದರು. ಈ ವೇಳೆ ಸಚಿವ ಈಶ್ವರ್​ ಖಂಡ್ರೆ ಕಂಡು ಮಹಿಳೆಯೊಬ್ಬರು ಓಡಿ ಬಂದರು. ಅವರ ಬಳಿ ಸಮಸ್ಯೆ ಆಲಿಸಿದ ಸಚಿವರು ಚಿಕಿತ್ಸೆ ಸರಿಯಾಗಿ ದೊರೆಯುತ್ತಿದೆಯ ಎಂದು ಕೇಳಿದರು. ಅದಕ್ಕೆ ಮಹಿಳೆ ಎಲ್ಲವೂ ಚನ್ನಾಗಿದೆ ನಿಮ್ಮನ್ನು ನೋಡಬೇಕು ಅಂತಾ ಬಂದೆ ಎಂದು ಖುಷಿಯಿಂದ ಹೇಳಿದರು.

RELATED ARTICLES

Related Articles

TRENDING ARTICLES