Saturday, November 2, 2024

ದರ್ಶನ್​​ಗೆ ಜಾಮೀನು ಮಂಜೂರು : ಬಳ್ಳಾರಿ ಜೈಲಿನತ್ತ ದಾವಿಸುತ್ತಿರುವ ಅಭಿಮಾನಿಗಳು

ಬಳ್ಳಾರಿ : ಸುಮಾರು 4 ತಿಂಗಳಿನಂದ ಜೈಲಿನಲ್ಲಿದ್ದ ನಟ ದರ್ಶನ್​ಗೆ ಕೊನೆಗೂ ಹೈಕೋರ್ಟ್​ ಜಾಮೀನು ನೀಡಿದ್ದು. ಜಾಮೀನು ಸಿಕ್ಕಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ನಟ ದರ್ಶನ್​ ಜೈಲಿನಲ್ಲಿ ಖುಷಿಪಟ್ಟಿದ್ದಾರೆ ಎಂಬ ಮಾಹಿತಿ ದೊರೆತಿದೆ. ಜೈಲು ಸಿಬ್ಬಂದಿಗಳ ಮೂಲಕ ಮಾಹಿತಿ ಪಡೆದಿರೊ ನಟ ದರ್ಶನ್​ ಜೈಲಿನಿಂದ ರಿಲೀಸ್​ ಆಗುವ ಖುಷಿಯಲ್ಲಿದ್ದಾರೆ.

131 ದಿನಗಳ ಕಾಲ ಜೈಲಿನಲ್ಲಿ ನರಕಯಾತನೆ ಅನುಭವಿಸಿರುವ ನಟ ದರ್ಶನ್​ಗೆ ಕೊನೆಗು ನ್ಯಾಯಾಲಯ 42 ದಿನಗಳ ಕಾಲ ಷರತ್ತುಬದ್ದ ಜಾಮೀನು ನೀಡಿ ರಿಲೀಫ್​ ನೀಡಿದೆ. ನೆಚ್ಚಿನ ನಟನಿಗೆ ಜಾಮೀನು ಸಿಕ್ಕಿದೆ ಎಂದು ತಿಳಿಯುತ್ತಿದ್ದಂತೆ ದರ್ಶನ್​ ಅಭಿಮಾನಿಗಳು ಬಳ್ಳಾರಿ ಜೈಲಿನತ್ತ ಧಾವಿಸುತ್ತಿದ್ದು. ಅಭಿಮಾನಿಗಳನ್ನು ನಿಯಂತ್ರಿಸಲು ಪೋಲಿಸರು ಜೈಲಿನ ಮುಂದೆ ಬ್ಯಾರಿಕೇಡ್​ಗಳನ್ನು ಹಾಕಿ ಸಿದ್ದತೆ ನಡೆಸುತ್ತಿದ್ದಾರೆ.

ನಾಳೆಯಿಂದ ದೀಪಾವಳಿ ಪ್ರಯುಕ್ತ ಸಾಲು ರಜೆಗಳು ಇರುವ ಹಿನ್ನಲೆ ಶತಾಯಗಥಾಯ ಇಂದೇ ದರ್ಶನ್​ನನ್ಉ ಹೊರಗೆ ತರಬೇಕು ಎಂದು ದರ್ಶನ್​ ಪರ ವಕೀಲರ ತಂಡ ಪ್ರಯತ್ನಿಸುತ್ತಿದ್ದು. ಕೋರ್ಟ್​ನಿಂದ ಆದೇಶ ಪ್ರತಿಯನ್ನು ಬಳ್ಳಾರಿ ಜೈಲಿಗೆ ನೀಡಿ, ಜಾಮೀನು ಷರತ್ತುಗಳನ್ನು ಪೂರೈಸಿ ಇಂದೇ ಬಿಡುಗಡೆ ಮಾಡುತ್ತಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES