Saturday, November 2, 2024

ರಾಮ ಮಂದಿರದಲ್ಲಿ ಮೊದಲ ದೀಪಾವಳಿ ಆಚರಣೆ: 25 ಲಕ್ಷ ಹಣತೆಗಳನ್ನು ಬೆಳಗಿಸಲು ಸಿದ್ದತೆ

ಅಯೋದ್ಯ : ರಾಮ ಮಂದಿರದಲ್ಲಿ ಈ ಬಾರಿ ಮೊದಲ ದೀಪಾವಳಿ ಆಚರಣೆ ಮಾಡಲಾಗುತ್ತಿದ್ದು. ರಾಮ ಮಂದಿರದಲ್ಲಿ ಬಾಲ ರಾಮನ ವಿಗ್ರಹ ಪ್ರಾಣ ಪ್ರತಿಷ್ಟಾಪನೆ ಮಾಡಿದ ನಂತರ ಮೊದಲ ಬಾರಿಗೆ ದೀಪಾವಳಿ ಆಚರಣೆ ಮಾಡಲಾಗುತ್ತಿದೆ. ಒಟ್ಟು 25 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನಿಸ್​ ರೆಕಾರ್ಡ್​ ನಿರ್ಮಿಸುತ್ತಿದ್ದಾರೆ.

ಸುಮಾರು 1100 ಜನ ಈ ಆರತಿಯಲ್ಲಿ ಭಾಗವಹಿಸುತ್ತಿದ್ದು. 25 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಕಳೆದ ಬಾರಿ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಮುರಿಯಲು ಅಯೋಧ್ಯೆ ಸಿದ್ದತೆ ನಡೆಸಿದೆ. ಕಳೆದ ಬಾರಿ ಒಟ್ಟು 22 ಲಕ್ಷ 33 ಸಾವಿರ ದೀಪಗಳನ್ನು ಬೆಳಗಿಸಿ ಈ ದಾಖಲೆ ಮಾಡಲಾಗಿತ್ತು. ದೀಪೋತ್ಸವದ ಜೊತೆಗೆ ಡ್ರೋನ್​ ಶೋ ಪ್ರದರ್ಶನವನ್ನು ಆಯೋಜಿಸಿದ್ದು. ಸಂಪೂರ್ಣ ಅಯೋಧ್ಯೆ ಶ್ರೀ ರಾಮನನ್ನು ಬರ ಮಾಡಿಕೊಳ್ಳಲು ಅದ್ದೂರಿ ಸಿದ್ದತೆಯನ್ನು ಮಾಡಿಕೊಂಡಿದೆ.

ಸಾವಿರಾರು ಸ್ವಯಂ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ವಿವಿಧ ರಾಜ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಮ ಮಂದಿರದ ಬಳಿ ಆಯೋಜನೆ ಮಾಡಲಾಗಿದೆ. ವಿಶೇಷವಾಗಿ ಘಾಟ್​ ನಂ 10ರಲ್ಲಿ ಸುಮಾರು 6 ಲಕ್ಷದ 80 ಸಾವಿರ ದೀಪಗಳನ್ನು ಬಳಸಿಕೊಂಡು ಸ್ವಸ್ತಿಕ್​ ಚಿತ್ರವನ್ನು ಬಿಡಿಸಿದ್ದು, ಇದು ಇಡೀ ಕಾರ್ಯಕ್ರಮದ ಆಕರ್ಷಣೆಯಾಗಿದೆ. ಇದನ್ನು ಕಣ್​ತುಂಬಿಕೊಳ್ಳಲು ಪ್ರವಾಸಿಗರು ಮತ್ತು ಭಕ್ತರು ಅಯೋಧ್ಯೆಗೆ ಆಗಮಿಸಿದ್ದು ಸಂಪೂರ್ಣ ಅಯೋಧ್ಯೆ ಜಗಮಗಿಸುತ್ತಿದೆ.

RELATED ARTICLES

Related Articles

TRENDING ARTICLES