Monday, December 23, 2024

ಹೊಸ ದಾಖಲೆ ಸೃಷ್ಟಿಸಿದ ನಮ್ಮ ಮೆಟ್ರೋ : ಅಕ್ಟೋಬರ್​ನಲ್ಲಿ ದಾಖಲೆಯ ಪ್ರಯಾಣಿಕರ ಸಂಚಾರ

ಬೆಂಗಳೂರು :  ಸಾಲು,ಸಾಲು ಹಬ್ಬಗಳ ಜೊತೆಗೆ ಬೆಂಗಳೂರಿನಲ್ಲಿ ಬಿದ್ದ ಮಳೆಯ ಎಫೆಕ್ಟ್​ನಿಂದಾಗಿ ನಮ್ಮ ಮೆಟ್ರೋದಲ್ಲಿ ದಾಖಲೆಯ ಜನರು ಸಂಚಾರ ಮಾಡಿದ್ದು. ಇದರಿಂದಾಗಿ ಸುಮಾರು 48 ಕೋಟಿಯಷ್ಟು ಆದಾಯ ಹರಿದು ಬಂದಿದೆ ಎಂದು ಮಾಹಿತಿ ದೊರೆತಿದೆ.

ನಗರದಲ್ಲಿ‌ ಸುರಿದ ಮಳೆ ಎಫೆಕ್ಟ್​ನಿಂದಾಗಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಬಾರೀ ಹೆಚ್ಚಳವಾಗಿದ್ದು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. 2023 ರ ಅ.1 ರಿಂದ ಅ. 24 ರವರೆಗೆ 1.52 ಕೋಟಿ ಜನರು ಮೆಟ್ರೊದಲ್ಲಿ ಪ್ರಯಾಣಿಸಿದ್ದರು. ಆದರೆ 2024 ರ ಅಕ್ಟೋಬರ್ ನಲ್ಲಿ 1.85 ಕೋಟಿ ಜನರು ಮೆಟ್ರೊ ಬಳಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಕಳೆದ ವರ್ಷಕ್ಕಿಂತ ಈ ವರ್ಷ ಮೆಟ್ರೋದಲ್ಲಿ 32.90 ಲಕ್ಷ ಜನರು ಹೆಚ್ಚಾಗಿ ಪ್ರಯಾಣಿಸಿದ್ದಾರೆ. ಅತಿ ಹೆಚ್ಚು ಪ್ರಯಾಣಿಕರು ಮೆಜೆಸ್ಟಿಕ್ ಮೆಟ್ರೊ ನಿಲ್ದಾಣವನ್ನು ಬಳಸಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಮೆಟ್ರೋ ಆದಾಯದಲ್ಲೂ ಬಾರೀ ಏರಿಕೆ ಕಂಡು ಬಂದಿದೆ. 2023ನೇ ಇಸವಿಯ ಅಕ್ಟೋಬರ್ ತಿಂಗಳ ಮೊದಲ 24 ದಿನಗಳಲ್ಲಿ 39.12 ಕೋಟಿ ರೂ. ಸಂಗ್ರಹವಾಗಿತ್ತು. ಈ ವರ್ಷ 48.35 ಕೋಟಿ ರೂ. ಹಣ ಪ್ರಯಾಣಿಕರ ಟಿಕೆಟ್ ಮೂಲಕ ಮೆಟ್ರೊಗೆ ಆದಾಯ ಬಂದಿದ್ದು ಕಳೆದ ವರ್ಷಕ್ಕೆ ಹೋಲಿಸಿದ್ರೆ 9.22 ಕೋಟಿ ರೂ. ಹೆಚ್ಚಿನ ಆದಾಯ ಬಂದಿದೆಬ ಎಂಬ ಮಾಹಿತಿ ದೊರತಿದೆ.

RELATED ARTICLES

Related Articles

TRENDING ARTICLES