Thursday, December 5, 2024

ಪತ್ನಿಯೊಂದಿಗೆ ಅಕ್ರಮ ಸಂಬಂಧ ; ಸ್ನೇಹಿತನಿಂದಲೇ ಕೊಲೆಯಾದ ಯುವಕ

ಮಂಡ್ಯ : ಸಕ್ಕರೆನಾಡಲ್ಲಿ ಅಕ್ರಮ ಸಂಬಂಧಕ್ಕೆ ಯುವಕನ ಕೊಲೆಯಾಗಿದ್ದು. ಜೊತೆಯಲ್ಲಿದ್ದ ಸ್ನೇಹಿತರಿಂದಲೇ ಅರವಿಂದ (29)ನ ಕೊಲೆಯಾಗಿದೆ. ಸ್ಥಳಕ್ಕೆ ಪಾಂಡವಪುರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು. ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ, ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಘಟನೆ ನಡೆದಿದ್ದು.ನಾಗಮಂಗಲ ತಿರುಮಲಾಪುರ ಗ್ರಾಮದ ಅರವಿಂದ್ (23) ಎಂಬ ಯುವಕ ಬರ್ಬರವಾಗಿ ಕೊಲೆಯಾಗಿದ್ದಾನೆ. ಈತ ತನ್ನ ಸ್ನೇಹಿತರ ಜೊತೆ ಚಿನಕುರುಳಿ ಗ್ರಾಮದ ಕುಮಾರ್ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ರಾತ್ರಿ ಸ್ನೇಹಿತರ ಜೊತೆ ಮದ್ಯ ಸೇವಿಸಿ ಮಲಗಿದ್ದ ಅರವಿಂದನನ್ನು ಸ್ನೇಹಿತರೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.

ಆತನ ಜೊತೆಯಲ್ಲಿ ಮಲಗಿದ್ದ ಸ್ನೇಹಿತರಾದ ವಿಜಯ್ ಹಾಗು ಏಳುಮಲೈ ಎಂಬುವರಿಂದ ಹತ್ಯೆ ನಡೆದಿದ್ದು.ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದರಿಂದ ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ. ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನದ ವಶಕ್ಕೆ ನೀಡಿದ್ದು ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES