Thursday, November 21, 2024

ವಕ್ಫ್​ ಕಾನೂನು ಜಾರಿ ಮಾಡಿಮಾಡುವ ಮುನ್ನ ಆಸ್ತಿ ವಶಪಡಿಸಿಕೊಳ್ಳಲು ಸಂಚು ರೂಪಿಸಿದ್ದಾರೆ: ಅರಗ ಜ್ಞಾನೇಂದ್ರ

ಶಿವಮೊಗ್ಗ: ವಿಜಯಪುರ ಜಿಲ್ಲೆಯ ಸಾವಿರಾರು ರೈತರ ಪಾಣಿಯಲ್ಲಿ ರೈತರ ಹೆಸರು ಹೋಗಿ ವಕ್ಪ್ ಮಂಡಳಿ ಹೆಸರು ಪ್ರಕಟವಾಗಿರಿವ ವಿಷಯಕ್ಕೆ ಸಂಬಂದಿಸಿದಂತೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು. ಸಚಿವ ಜಮೀರ್​ ಅಹಮದ್​ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಗೃಹ ಸಚಿವ ವಿಜಯಪುರದ ರೈತರು ನೂರಾರು ವರ್ಷದಿಂದ ತಮ್ಮ ಭೂಮಿಯಲ್ಲಿ ಸಾಗುವಳಿ ಮಾಡ್ತಿದ್ದಾರೆ. ಅ.7 ಹಾಗು 8 ರಂದು ಜಾತ್ಯಾತೀತ ತತ್ವದ ಬಗ್ಗೆ ಬೊಗಳೆ ಬಿಡುವ ಜಮೀರ್ ಅಹಮದ್ ವಕ್ಪ್ ಅಧಿಕಾರಿಗಳನ್ನು ಸೇರಿಸಿ ಸಭೆ ಮಾಡಿದ್ದಾರೆ. ಆ ನಂತರ ಖಾತೆ ಬದಲಾವಣೆ ಆಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಹೊಸ ವಕ್ಫ್ ಕಾನೂನು ತರುತ್ತಿದೆ. ಆ ಕಾನೂನು ಜಾರಿ ಆಗುವುದರೊಳಗೆ ಆಸ್ತಿ ವಶಪಡಿಸಿಕೊಳ್ಳಬೇಕು ಎಂದು ಸಂಚು ರೂಪಿಸಿ ಅಧಿಕಾರಿಗಳು ರಾತ್ರೋ ರಾತ್ರಿ ರೈತರನ್ನು ಹೆದರಿಸಿದ್ದಾರೆ. ಈಗ
ರೈತರು ಜಮೀನು ತಗೊಂಡು ಹೋದರೆ ಬ್ಯಾಂಕ್ ನಲ್ಲಿ ಸಾಲ ಸಿಗೋದಿಲ್ಲ. ಕೇವಲ ಹಿಂದುಗಳದ್ದು ಮಾತ್ರವಲ್ಲದೆ ತಿಕೋಟ ಭಾಗದ ಅನೇಕ ಮುಸ್ಲಿಂರ ಜಮೀನು ಈ ರೀತಿ ಆಗಿದೆ.

ಸಚಿವ ಎಂ.ಬಿ.ಪಾಟೀಲ್ ಕೇವಲ ಸಗಣಿ ಸಾರಿಸುವ ಕೆಲಸ ಮಾಡಿದ್ದಾರೆ.ತಪ್ಪಾಗಿ ಎಂಟ್ರಿ ಆಗಿದೆ ಅಂದಿದ್ದಾರೆ
ತಪ್ಪು ಎಂಟ್ರಿ ಮಾಡಿದ್ದು ಯಾರು ಆ ಅಧಿಕಾರಿ ವಿರುದ್ಧ ‌ಕ್ರಮ ಕೈಗೊಳ್ಳಿ. ದೇವಸ್ಥಾನದ ಹೆಸರು, ಟ್ರಸ್ಟ್, ಮಠದ ಹೆಸರಿನಲ್ಲಿದ್ದ ಭೂಮಿಯನ್ನು ಉಳುವವನೇ ಭೂ ಒಡೆಯ ಅಂತಾ ಮಾಡಿದರು. ಈ ಕಾನೂನಿನಿಂದ ಸಾಗುವಳಿ ಮಾಡುವ ರೈತರ ಹೆಸರಿಗೆ ಸರಕಾರ ಪಾಣಿ ಬರೆಯಿತು ರೈತರ ಭೂಮಿ‌ ಕಸಿದು ವಕ್ಪ್ ಆಸ್ತಿ ಎಂದು ಬರೆಯುವ ಕೆಲಸವನ್ನು ಸರಕಾರ ಮಾಡ್ತಿದೆ.ಸರಕಾರ ಇದನ್ನು ಸರಿಪಡಿಸುವ ಕೆಲಸ ಮಾಡಬೇಕು.ಇಲ್ಲದಿದ್ದರೆ ಯಾರು ಯಾರ ಜಮೀನು ಏನು ಮಾಡ್ತಾರೆ ಗೊತ್ತಿಲ್ಲ. ಶಿವಮೊಗ್ಗ ಜಿಲ್ಲೆಯ ಹಣಗೆರೆಕಟ್ಟೆಯಲ್ಲಿ ಸಹ ಅಧಿಕಾರಿಯೊಬ್ಬ ಪಾಣಿ ತಿದ್ದುವ ಕೆಲಸ ಮಾಡಿದ್ದ. ಈ ವಿಷಯ ನನಗೆ ಗೊತ್ತಾಗಿ ನಾನು ತಡೆ ಹಿಡಿದೆ. ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ ಅವರ ಪಿಎ ಒಬ್ಬ ಮುಸ್ಲಿಂ ಅಧಿಕಾರಿ ಈ ಕೆಲಸ ಮಾಡಲು ಹೊರಟ್ಟಿದ್ದ ಎಂದು ಹೇಳಿದರು.

ವಿಜಯಪುರ ಜಿಲ್ಲೆಯ ರೈತರಿಗೆ ಸರಕಾರ ದೀಪಾವಳಿ ಗಿಫ್ಟ್ ಕೊಡಲು ಹೊರಟಿದೆ. ವಿಜಯಪುರ ಜಿಲ್ಲೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ. 1975 ರಲ್ಲಿ ಗೆಜೆಟ್ ಆಗಿದೆ ಅಂತಾರೆ ಆಗ ಏನು ಮಣ್ಣು ತಿನ್ನುತ್ತಿದ್ದರಾ. ಸರಕಾರ ಬೆಲೆ ತೆರುವಂತಹ ಕೆಲಸ ಮಾಡಬೇಕಾಗುತ್ತದೆ, ಇದು ಕೋಮುವಾದಿ ಸರಕಾರ ಅದಕ್ಕೆ ಹುಬ್ಬಳ್ಳಿಯ ಕೇಸ್ ವಾಪಸ್ ತಗೊಂಡರು. ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣವನ್ನು ವಾಪಸ್ ತಗೋತ್ತಾರೆ ರೈತ ಸಂಘಟನೆಗಳು ಮೂಕರಾಗಿದ್ದಾರೆ

RELATED ARTICLES

Related Articles

TRENDING ARTICLES