Wednesday, January 22, 2025

ಬಸ್​ನಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್​​​ ಅನ್ನು ಹಿಂದುರಿಗಿಸಿದ ಪ್ರಾಮಾಣಿಕ ಕಂಡೆಕ್ಟರ್​​

ಗದಗ : ಸಾಮಾನ್ಯವಾಗಿ ನಾವು ಬಸ್​ನಲ್ಲಿ ಪ್ರಯಾಣಿಸಬೇಕಾದರೆ ನಮ್ಮ ಗಮನ ನಾವು ತೆಗೆದುಕೊಂಡು ಹೋಗುತ್ತಿರುವ ವಸ್ತುಗಳ ಮೇಲೆ ಇರುತ್ತದೆ. ಆದರೆ ಕೆಲವೊಮ್ಮೆ ನಮ್ಮ ಆತುರದಿಂದಲೊ ಅಥವಾ ನಮ್ಮ ಮಂದ ಬುದ್ದಿಶಕ್ತಿಯಿಂದಲೊ ನಾವು ನಮ್ಮ ವಸ್ತುಗಳನ್ನು ಮರೆತು ಬಸ್​ ಇಳಿದಿರುತ್ತೇವೆ. ನಂತರ ನಮಗೆ ನೆನಪಾಗುತ್ತದೆ ನಮ್ಮ ಬ್ಯಾಗ್​ ಬಸ್​ನಲ್ಲಿಯೆ ಇದೆ ಎಂದು ಆಗ ನಾವು ಹೋಗಿ ಹುಡುಕುವಸ್ಟರಲ್ಲಿ ನಮ್ಮ ಬ್ಯಾಗ್​ ಬೇರೆಯವರ ಪಾಲಾಗಿರುತ್ತದೆ. ಆಗ ನಮಗೆ ಅನುಮಾನ ಬರುವುದು ಕಂಡೆಕ್ಟರ್​ ಮೇಲೆಯೆ, ನಮ್ಮ ವಸ್ತುಗಳನ್ನು ಈತನೆ ಎಗರಿಸಿದ್ದಾನೆ ಎಂದು ಪೋಲಿಸರಿಗೆ ದೂರು ಕೊಡುತ್ತೇವೆ. ಈ ರೀತಿಯಾಗಿ ಕಳೆದುಕೊಂಡ ವಸ್ತುಗಳು ನಮಗೆ ಸಿಗದೆ ಕಳೆದು ಹೋಗುವುದೆ ಹೆಚ್ಚು. ಆದರೆ ಇಲ್ಲೊಬ್ಬ ನಿರ್ವಾಹಕಿ ತನ್ನ ಪ್ರಾಮಾಣಿಕತೆಯಿಂದ ಸಾರ್ವಜನಿಕರ ಗೌರವಕ್ಕೆ ಪಾತ್ರರಾಗಿದ್ದಾರೆ.

ಗದಗ ತಾಲೂಕಿನ ಮುಳಗುಂದ ಪಟ್ಟಣದ ಶಕಿಲಾಬಾನು ಎಂಬ ಮಹಿಳೆ ಬಸ್​ನಲ್ಲಿ ಪ್ರಯಾಣ ಮಾಡುವ ವೇಳೆ ತಮ್ಮ ಬ್ಯಾಗ್​ ಅನ್ನು ಬಸ್​ನಲ್ಲಿಯೆ ಬಿಟ್ಟು ಗದಗದಲ್ಲಿ ಇಳಿದು ಹೋಗಿದ್ದರು. ಈ ಬ್ಯಾಗ್​ನಲ್ಲಿ 30ಗ್ರಾಂ ಚಿನ್ನ, 100ಗ್ರಾಂ ಬೆಳ್ಳಿ, ಮತ್ತು 2160 ರೂಪಯಿ ನಗದು ಇತ್ತು. ಈ ಬ್ಯಾಗ್​ ಅನ್ನು ನೋಡಿದ ಬಸ್​ ನಿರ್ವಾಹಕಿ ಅನುಸೂಯ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಬ್ಯಾಗ್​ ಪರಿಶೀಲಿಸಿದ ಅಧಿಕಾರಿಗಳಿಗೆ ಬ್ಯಾಗ್​ನಲ್ಲಿದ್ದ ಪ್ಯಾನ್​ ಕಾರ್ಡ್ ಸಿಕ್ಕಿದ್ದರಿಂದ ಪೋಲಿಸರಿಗೆ ಮಾಹಿತಿ ನೀಡಿ ಬ್ಯಾಗ್​ ಮಾಲೀಕರನ್ನು ಕರೆಸಿ ಬೆಟಗೇರಿ ಬಡಾವಣೆ ಪೋಲಿಸರ ಸಮ್ಮುಖದಲ್ಲಿ ಆಭರಣ ಮತ್ತು ಹಣವನ್ನು ಮರಳಿಸಲಾಗಿದೆ. ನಿರ್ವಾಹಕಿ ಅನುಸೂಯ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES