Wednesday, January 22, 2025

IND vs NZ: 12 ವರ್ಷದ ಬಳಿಕ ತವರಿನಲ್ಲಿ ಟೆಸ್ಟ್ ಸರಣಿ ಸೋತ ಭಾರತ

ಪುಣೆ : ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಎರಡನೇ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಕಳೆದ 12 ವರ್ಷಗಳ ನಂತರ ಭಾರತ ತಂಡ ತವರಿನಲ್ಲಿ ಟೆಸ್ಟ್​ ಸರಣಿಯನ್ನು ಸೋತಿದ್ದು. ಇನ್ನು ಒಂದು ಪಂದ್ಯ ಬಾಕಿ ಇರುವಾಗಲೆ ನ್ಯೂಜಿಲ್ಯಾಂಡ್​ ತಂಡ 0-2 ಅಂತರದಲ್ಲಿ ಸರಣಿ ವಷ ಪಡಿಸಿಕೊಂಡಿದೆ.

ಎರಡನೇ ಇನಿಂಗ್ಸ್​ನಲ್ಲಿಯು ನೀರಸ ಬ್ಯಾಟಿಂಗ್​ ಪ್ರದರ್ಶನ ನೀಡಿದ ಭಾರತ ತಂಡ 245 ರನ್​ಗಳಿಗೆ ಸರ್ವಪತನಗೊಂಡಿತು. ಇದರಿಂದಾಗಿ ಆತೀಥೆಯ ನ್ಯೂಜಿಲ್ಯಾಂಡ್ ತಂಡ 113 ರನ್​ಗಳ ಭರ್ಜರಿ ಜಯ ದಾಖಲಿಸಿತು.

ಪಂದ್ಯ ಗೆಲ್ಲಲು 353 ರನ್​ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆರಂಭಿಕರಾದ ರೋಹಿತ್​ ಶರ್ಮ (08) ವಿಕೆಟ್​ ಕಳೆದುಕೊಂಡು ಆರಂಭಿಕ ನಿರಾಸೆ ಅನುಭವಿಸಿತು. ನಾಯಕನ ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದ ಭಾರತ ತಂಡಕ್ಕೆ ಯುವ ಬ್ಯಾಟರ್​ಗಳಾದ ಯಶಸ್ವಿ ಜೈಸ್ವಾಲ್​ (77) ಮತ್ತು ಶುಭಮನ್ ಗಿಲ್ (23) ಕೆಲಕಾಲ ಸ್ಕ್ರೀಸ್​ನಲ್ಲಿ ನಿಂತು ತಂಡಕ್ಕೆ ಆಸರೆ ನೀಡಿದರು. ಇವರಿಬ್ಬರ ವಿಕೆಟ್​ ಕಳೆದುಕೊಂಡ ನಂತರ ಉಳಿದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಆಲ್​ರೌಂಡರ್​ ರವೀಂದ್ರ ಜಡೇಜ (42) ರನ್​ಗಳಿಸಿ ಕೆಲಕಾಲ ಗೆಲುವಿನ ಆಸೆಯನ್ನು ಚಿಗುರಿಸಿದರು. ಆದರೆ ಇವರು ಟೀಮ್​ ಸೌತಿಗೆ ವಿಕೆಟ್​ ಒಪ್ಪಿಸಿದರು.

ನ್ಯೂಜಿಲ್ಯಾಂಡ್​ ಪರ ಮಿಚೆಲ್​ ಸ್ಯಾಂಟ್ನರ್​ 6 ವಿಕೆಟ್​ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ಯಾಂಟಿಗ್​ ಮತ್ತು ಬೌಲಿಂಗ್​ನಲ್ಲಿ ಸಂಘಟಿತ ಪ್ರದರ್ಶನ ತೋರಿದ ನ್ಯೂಜಿಲ್ಯಾಂಡ್​ ತಂಡ ಅಮೋಘ ಜಯ ದಾಖಳಿಸಿತು.

 

RELATED ARTICLES

Related Articles

TRENDING ARTICLES