Wednesday, January 22, 2025

ವಿಷ ಹಾಕಿ ಗಂಡನ ಕೊಲೆ : ಪ್ರಿಯಕರನಿಗಾಗಿ ಸ್ವಂತ ಪತಿಯನ್ನೇ ಕೊಲೆ ಮಾಡಿದ ಪತ್ನಿ

ಕಾರ್ಕಳ : ಮಹಿಳೆಯೊಬ್ಬಳು ತನ್ನ ಗಂಡನನ್ನೆ ಕೊಲೆ ಮಾಡಿರುವ ಘಟನೆ ಕಾರ್ಕಳದ, ಅಜೆಕಾರು ದೆಪ್ಪುತ್ತೆ ಎಂಬಲ್ಲಿ ನಡೆದಿದ್ದು. ವಿಷ ಹಾಕಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಪತ್ನಿ ಪ್ರತಿಮಾ ತನ್ನ ಸ್ವಂತ ಪತಿಗೆ ಬಾಲಕೃಷ್ಣನಿಗೆ  ವಿಷವುಣಿಸಿ  ಕೊಲೆ ಮಾಡಿದ್ದಾಗಿ ಪೋಲಿಸರ ಮುಂದೆ ತಪ್ಪೊಪ್ಪಿಕೊಂಡಿದ್ದು. ತನ್ನ ಪ್ರಿಯಕರ ದಿಲೀಪ್ (29) ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎಂದು ಮಾಹಿತಿ ದೊರೆತಿದೆ.

ಯಾಕೆ ಕೊಲೆಯಾಯಿತು ?

ಪತ್ನಿ ಪ್ರತಿಮಾಗೆ ರೀಲ್ಸ್ ಮಾಡುವ ಚಾಲಿಯಿಂದ ಆಕೆ ರೀಲ್ಸ್​ ಮಾಡಲು ತವಕಿಸುತ್ತಿದ್ದಳು. ಇದರಿಂದ ಆಕೆಗೆ ಸಾಮಾಜಿಕ ಜಾಲತಾಣದಲ್ಲಿ ದಿಲೀಪಮ ಪರಿಚಯವಾಗಿ ಆತನ ಜೊತೆ ಪ್ರೀತಿಯಾಗಿತ್ತು. ಈ ಪ್ರೀತಿಗೆ ತನ್ನ ಪತಿ ಅಡ್ಡಿಯಾಗುತ್ತಾನೆ ಎಂದು ತನ್ನ ಪ್ರಿಯಕರನ ಜೊತೆ ಸೇರಿ ಆಕೆಯನ್ನು ಕೊಲೆ ಮಾಡದ್ದಾಳೆ.

ಮೊದಲ ಬಾರಿಗೆ ತನ್ನಪತಿಗೆ ವಿಷ ಹಾಕಿದಾಗ ಬಾಲಕೃಷ್ಣ ಅನಾರೋಗ್ಯವೆಂದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಹುಷಾರಾಗಿದ್ದನು. ಆರೋಗ್ಯ ಸುಧಾರಿಸಿಕೊಂಡು ಮನೆಗೆ ಬಂದ ನಂತರ ಗಂಡ ಬಾಲಕೃಷ್ಣ ದಿಡೀರನೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಾಲಕೃಷ್ಣಮ ಅಸಹಜ ಸಾವಿನಿಂದ ಅನುಮಾನಗೊಂಡ ಕುಟುಂಬ್ಥರು ಪೋಲಿಸರಿಗೆ ಮಾಹಿತಿ ನೀಡಿದರು.

ಪತಿಯ ಸಾವನ್ನಪ್ಪಿದ್ದರು ಪ್ರತೀಮಾಳ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಅಸಹಜ ಸಾವಿನ ಕುರಿತಾಗಿ ಪೋಲಿಸರಿಗೆ ವಿಚಾರಣೆ ಮಾಡಲು ಒತ್ತಾಯಿಸಿದ್ದರು. ಪೋಲಿಸರ ವಿಚಾರಣೆ ವೇಳೆ ತನ್ನ ಪತಿಯನ್ನು ಕೊಂದಿರುವ ಬಗ್ಗೆ ತಪ್ಪೊಪ್ಪಿಕೊಂಡಿರುವುದಾಗಿ ಮಾಹಿತಿ ದೊರೆತಿದ್ದು. ಅಜೆಕಾರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

RELATED ARTICLES

Related Articles

TRENDING ARTICLES