ಮುಂಬೈ : ಭಾರತ ಕಂಡ ಅಪ್ರತಿಮ ಉದ್ಯಮಿ ರತನ್ ಟಾಟಾ ನಿಧನವಾಗಿರೋದು ನಿಮಗೆಲ್ಲಾ ಗೊತ್ತೇ ಇದೆ. ಅಕ್ಟೋಬರ್ 9ರಂದು ರತನ್ ನೊವಲ್ ಟಾಟಾ ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ರತನ್ ಟಾಟಾ ನಿಧನದ ಬಳಿಕ ಅವರ 10 ಸಾವಿರ ಕೋಟಿ ರೂ. ಮೌಲ್ಯದ ಸಂಪತ್ತಿನ ಬಗ್ಗೆ ಪ್ರಶ್ನೆಗಳು ಬರುತ್ತಲೇ ಇದ್ದವು. ಅಷ್ಟೊಂದು ಆಸ್ತಿ ಯಾರ ಪಾಲಾಗಲಿದೆ ಎಂಬ ಬಗ್ಗೆ ಚರ್ಚೆಗಳು ಕೂಡ ನಡೆಯುತ್ತಿದ್ದವು. ಇದಕ್ಕೆಲ್ಲಾ ಈಗ ಉತ್ತರ ಸಿಕ್ಕಿದ್ದು.
ರತನ್ ಟಾಟಾ ಅವರ ವಿಲ್ ಅಂದ್ರೇ ಉಯಿಲು ಪತ್ರ ಬಹಿರಂಗವಾಗಿದೆ. ರತನ್ ಟಾಟಾ ತಮ್ಮ ವಿಲ್ ಪತ್ರದಲ್ಲಿ ಯಾವುದೇ ಗೊಂದಲವಿಲ್ಲದಂತೆ ಸ್ಪಷ್ಟ ನಿರ್ದೇಶನವನ್ನು ನೀಡಿದ್ದಾರೆ. ವಿಶೇಷ ಅಂದರೆ ರತನ್ ಟಾಟಾ 10,000 ಕೋಟಿ ರೂಪಾಯಿ ಆಸ್ತಿಯಲ್ಲಿ ಅವರ ನೆಚ್ಚಿನ ನಾಯಿಗೆ ಅತೀ ದೊಡ್ಡ ಪಾಲನ್ನು ಮೀಸಲಿಟ್ಟಿದ್ದಾರೆ. ತಮ್ಮನ್ನು ನಂಬಿದ ಎಲ್ಲರಿಗೂ ನ್ಯಾಯ ಒದಗಿಸುವ ಪ್ರಯತ್ನವನ್ನು ಮಾಡಿದ್ದಾರೆ. ಬಹುತೇಕ ಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟಿರುವುದು ವಿಶೇಷ.
ಸುಮಾರು 10 ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಯಾವುದೇ ಗೊಂದಲವಿಲ್ಲದೇ ರತನ್ ಟಾಟಾ ಹಂಚಿದ್ದಾರೆ. ಶಂತನು ನಾಯ್ಡು, ಮೆಚ್ಚಿನ ನಾಯಿ ಟಿಟೋ ಹೆಸರನ್ನು ರತನ್ ಟಾಟಾ ತಮ್ಮ ವಿಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಸುಮಾರು 21 ವರ್ಷಗಳ ಕಾಲ ಟಾಟಾ ಗ್ರೂಪ್‌ನ ಮುಖ್ಯಸ್ಥರಾಗಿದ್ದ ರತನ್ ಟಾಟಾ 5.7 ಶತಕೋಟಿ ಡಾಲರ್ ಉದ್ಯಮವನ್ನು 100 ಶತಕೋಟಿ ಡಾಲರ್‌ಗೆ ವಿಸ್ತರಿಸಿದ್ದರು. ಕೇವಲ ಉದ್ಯಮ ಮಾತ್ರವಲ್ಲದೇ ಸಮಾಜ ಸೇವೆ, ದಾನದ ಮೂಲಕವೂ ರತನ್ ಟಾಟಾ ಗಮನ ಸೆಳೆದಿದ್ದರು. ಈಗ ತಮ್ಮ ಪಾಲಿನ ಬಹುತೇಕ ಆಸ್ತಿಯನ್ನು ಕೂಡ ಟ್ರಸ್ಟ್‌ಗೆ ವರ್ಗಾಯಿಸಬೇಕು ಎಂದು ಬರೆದಿರುವುದು, ಸಮಾಜದ ಮೇಲಿನ ರತನ್ ಟಾಟಾ ಅವರಿಗಿದ್ದ ಕಾಳಜಿಯನ್ನು ತೋರಿಸುತ್ತದೆ.