Sunday, December 15, 2024

ಪ್ರಯಾಣಿಕನಿಂದ ಬಿಎಂಟಿಸಿ ನಿರ್ವಾಹಕ ಮೇಲೆ ಹಲ್ಲೆ: ಕಲ್ಲಿನಿಂದ ತಲೆಗೆ ಹೊಡೆಯಲು ಯತ್ನ

ಬೆಂಗಳೂರು : ಬಿಎಂಟಿಸಿ ಬಸ್ ಡ್ರೈವರ್ ಮತ್ತು ಕಂಡೆಕ್ಟರ್​ಗಳ ಮೇಲೆ ಹಲ್ಲೆ ಯತ್ನ ಮುಂದುವರೆದಿದ್ದು. ಇದೀಗ ಮತ್ತೊಬ್ಬನಿಂದ ಕಂಡಕ್ಟರ ಮೇಲೆ ಯತ್ನವಾಗಿದೆ. ಚೂರು ಯಾಮಾರಿದ್ರು ಬಿಎಂಟಿಸಿ ಕಂಡಕ್ಟರ್ ಪ್ರಾಣವೇ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದ ಭಯಾನಕ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ.

ಕಳೆದ ಶುಕ್ರವಾರ ಟಿನ್ ಫ್ಯಾಕ್ಟರಿ ಬಳಿ ಘಟನೆ ನಡೆದಿದ್ದು. KA-14F1107 ನಂಬರಿನ ಬಿಎಂಟಿಸಿ ಬಸ್ ನಲ್ಲಿ ಘಟನೆ ನಡೆದಿದೆ. ಕೃತ್ಯ ನಡೆಯುವ ಮೂರು ದಿನದ ಹಿಂದೆ ಪಾಸ್ ತೋರಿಸುವ ವಿಚಾರಕ್ಕೆ ಬಸ್ ನಿರ್ವಾಹಕ ಮತ್ತು ಆರೋಪಿಯ ನಡುವೆ  ಕಿರಿಕ್ ಆಗಿತ್ತು. ಆ ವೇಳೆ ಕಂಡಕ್ಟರ್ ಸಂಗಪ್ಪನ ಹೊಟ್ಟೆಗೆ ಗುದ್ದಿ ಆರೋಪಿ ಹೇಮಂತ್ ಎಸ್ಕೇಪ್ ಆಗಿದ್ದನು.

ಈ ಘಟನೆಯಾದ ಬಳಿಕ ಮೂರು ದಿನಗಳಿಂದ ಕಂಡಕ್ಟರ್ ಮೇಲೆ ಹಲ್ಲೆ ಮಾಡಲು ಹೊಂಚು ಹಾಕಿದ್ದ ಕಿಡಿಗೇಡೆ ಹೇಮಂತ್ ಕಳೆದ ಶುಕ್ರವಾರ (ಅ.18)ಮಧ್ಯಾಹ್ನ 2.30 ರ ಸುಮಾರಿಗೆ, ಟಿನ್ ಫ್ಯಾಕ್ಟರಿ ಬಸ್ ಸ್ಟ್ಯಾಂಡ್ ನಲ್ಲಿ ಊಟ ಮಾಡುತ್ತಿರುವ ವೇಳೆ ಆರೋಪಿ ಹೇಮಂತ್ ದೊಡ್ಡದಾದ ಕಲ್ಲಿನಿಂದ ಕಂಡಕ್ಟರ್ ಸಂಗಪ್ಪನ ತಲೆಗೆ ಹೊಡೆದು ಎಸ್ಕೇಪ್ ಆಗಿದ್ದಾನೆ. ನಂತರ ಪ್ರಯಾಣಿಕರು ಆತನನ್ನು ಹಿಡಿದು ಪೋಲಿಸರ ವಶಕ್ಕೆ ನೀಡಿದ್ದಾರೆ ಎಂಬ  ಮಾಹಿತಿ ದೊರೆತಿದೆ.

ಎರಡು ತಿಂಗಳಲ್ಲಿ ಮೂರು ಘಟನೆ: 

(1) ಸೆಪ್ಟೆಂಬರ್- 8 ರಂದು ಅತ್ತಿಬೆಲೆ ಟು ಮೆಜೆಸ್ಟಿಕ್ ಬರುತ್ತಿದ್ದ ವೋಲ್ವೋ ಬಸ್ ನಲ್ಲಿ,
ಹೊಸ ರೋಡ್ ಬಸ್ ಸ್ಟಾಪ್ ನಲ್ಲಿ ಕಂಡಕ್ಟರ್ ಗೆ ಸ್ಕ್ರೂ ಡ್ರೈವರ್ ನಿಂದ ಚುಚ್ಚಲು ಮುಂದಾಗಿದ್ದ ಪ್ರಯಾಣಿಕ

(2) ಅಕ್ಟೋಬರ್- 1 ರಂದು ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್ ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್ ಗೆ ಹರ್ಷ ಸಿನ್ಹಾ ಅನ್ನೋ ಯುವಕ.ಎರಡ್ಮೂರು ಬಾರಿ ಚಾಕುವಿನಿಂದ ಚುಚ್ಚಿ ಕೊಲ್ಲಲು ಯತ್ನಿಸಿದ್ದ.

(3) ಈಗ ಕಳೆದ ಅ. 18 ರ ಶುಕ್ರವಾರ ಟಿನ್ ಫ್ಯಾಕ್ಟರಿ ಬಳಿ ಕಲ್ಲಿನಿಂದ ನಿರ್ವಾಹಕನ ತಲೆಗೆ ಹೊಡೆದು ಕೊಲ್ಲಲು ಯತ್ನಿಸಿದ ಘಟನೆ ನಡೆದಿದೆ.

 

RELATED ARTICLES

Related Articles

TRENDING ARTICLES