Monday, December 23, 2024

ಸಿಪಿವೈ ಕಾಂಗ್ರೆಸ್ ಸೇರ್ಪಡೆ: ಇದು ನಮಗೆ ಅಚ್ಚರಿಯಲ್ಲ ಎಂದು ಹೇಳಿದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : ಸಿ.ಪಿ ಯೋಗೇಶ್ವರ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ ಬೆಂಗಳೂರಿನಲ್ಲಿ ನಿಖಿಲ್ ಕುಮಾರ್​ಸ್ವಾಮಿ ಮಾತನಾಡಿದರು. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲದೆ ಎಂದು ಸಹಜ ಪ್ರತಿಕ್ರಿಯೆ ನೀಡಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ  ಇದರಲ್ಲಿ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ,ಯಾವಾಗ ಅವರು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ‌ ಕೊಟ್ರೋ ಆಗಲೇ ಇದರ ನಿರೀಕ್ಷೆ ಇತ್ತು ಅದೇ ರೀತಿಯಾಗಿದೆ. ಕಳೆದ ಎರಡು ತಿಂಗಳಿಂದ ನಿರಂತರವಾಗಿ ನನ್ನ ಹೆಸರು ಚಾಲ್ತಿಯಲ್ಲಿದೆ, ಜೆಡಿಎಸ್ ಕಾರ್ಯಕರ್ತರು ನಿಖಿಲ್ ಗೆ ಟಿಕೆಟ್ ಕೊಟ್ರೆ ನಾವು ಕೆಲಸ ಮಾಡ್ತೀವಿ ಎಂದು ಹೇಳಿದ್ದರು.

ನನ್ನ ತಂದೆಯು ಸಹ ತಾಳಿದವನು ಬಾಳಿಯಾನು ಎಂದು ಹೇಳಿದರು. ನಿಖಿಲ್ ನಿಲ್ಲಬೇಕು ಅಂತ ಕಾರ್ಯಕರ್ತರ ಭಾವನೆ ಇದ್ದಾಗ ನಾನು ಚುನಾವಣೆಗೆ ಹೆದರಲ್ಲ ಎಂದು ಹೇಳಿದ್ದೆ. ಎಂದು ಹೇಳಿದರು.

ಅಚ್ಚರಿಯ ರೀತಿಯಲ್ಲಿ ಚನ್ನಪಟ್ಟಣ ಚುನಾವಣೆಯ ಮೈತ್ರಿ ಅಭ್ಯರ್ಥಿಯಾಗಿ  ಹಾಲಿ ಸಂಸದ ಡಾ.ಸಿ.ಎನ್ ಮಂಜುನಾಥ್ ಅವರ ಧರ್ಮಪತ್ನಿ ಅನುಸೂಯಮ್ಮ ಹೆಸರು ಪ್ರಸ್ತಾಪ ವಿಚಾರವಾಗಿ ಮಾತನಾಡಿದ ನಿಖಿಲ್ ಕಾದು ನೋಡಿ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

RELATED ARTICLES

Related Articles

TRENDING ARTICLES