Wednesday, January 22, 2025

ಕೆರೆಯಲ್ಲಿ ಬಿದ್ದು ಸಾವನಪ್ಪಿದ್ದ ಮಕ್ಕಳ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸರ್ಕಾರ

ಬೆಂಗಳೂರು : ನಗರದ ಕೆಂಗೇರಿ ಬಳಿಯ ಗುರೂರು ಕೆರೆಯಲ್ಲಿ ಬಿದ್ದು ಎರಡು ಮಕ್ಕಳ ಸಾವನ್ನಪ್ಪಿದ ಘಟನೆ ಸಂಬಂಧ. ಸರ್ಕಾರ ಮೃತ ಮಕ್ಕಳ ಕುಟುಂಬಕ್ಕೆ 5ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಮೃತ ಮಕ್ಕಳ ತಾಯಿ ಪೌರ ಕಾರ್ಮಿಕರಾಗಿದ್ದು. ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಮಾಹಿತಿ ದೊರೆತಿದೆ.

ನೆನ್ನೆ (ಅ.22) ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದ ಮಕ್ಕಳ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೊರತೆಗೆದಿದ್ದರು. ಮಕ್ಕಳು ಕೆರೆಯಲ್ಲಿ ಬಿದ್ದು ಸಾವನ್ನಪ್ಪಲು ಸರ್ಕಾರವೇ ಕಾರಣ ಎಂದು ಆರೋಪಿಸಲಾಗಿತ್ತು. ಕೆರೆಗೆ ಯಾವುದೇ ತಡೆಗೋಡೆ ಇಲ್ಲದೆ ಇರುವುದರಿಂದ ಇದನ್ನು ಸರ್ಕಾರಿ ಪ್ರಾಯೋಜಕ ಕೊಲೆ ಎಂದು ಅನೇಕರು ಬಣ್ಣಿಸಿದ್ದರು. ಮತ್ತು ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು.

ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮೃತ ಮಕ್ಕಳ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

RELATED ARTICLES

Related Articles

TRENDING ARTICLES