Friday, January 24, 2025

ಕಟ್ಟಡದಿಂದ ಬಿದ್ದು ಪೈಂಟರ್ ಸಾವು : ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು

ಬೀದರ್ : ಬಣ್ಣ ಹಚ್ಚುವ ವೇಳೆ ಮೂರನೇ ಮಹಡಿಯಿಂದ ಬಿದ್ದು ಕಾರ್ಮಿಕ ದುರ್ಮರಣ ಹೊಂದಿರುವ ಘಟನೆ ಬೀದರ್ ನಗರದ ವಿದ್ಯಾನಗರದಲ್ಲಿ ನಡೆದಿದ್ದು. ಇಮ್ಯಾನುವೆಲ್ (23) ಎಂಬ ಯುವಕ ಮರಣಹೊಂದಿದ್ದಾನೆ ಎಂದು ಮಾಹಿತಿ ದೊರೆತಿದೆ.

ವಿದ್ಯಾನಗರದ ವಿದ್ಯಾನಂದ ಸ್ವಾಮಿ ಎಂಬುವವರ ಮನೆಗೆ ಬಣ್ಣ ಹಚ್ಚುವ ವೇಳೆ ದುರ್ಘಟನೆ ನಡೆದಿದ್ದು. ಮಂದಕನಳ್ಳಿ ಗ್ರಾಮದ ಇಮ್ಯಾನುವೆಲ್ (23) ಬಣ್ಣ ಹಚ್ಚುವ ವೇಳೆ ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.

ಗುತ್ತಿಗೆದಾರ, ಮನೆ ಮಾಲೀಕ, ಇಂಜನೀಯರ್‌ಗಳೆ ಸಾವಿಗೆ ಕಾರಣ ಎಂದು ಗ್ರಾಮಸ್ಥರ ಆಕ್ರೋಶ ವ್ತಕ್ತ ಪಡಿಸಿದ್ದು. ಮನೆಯಲ್ಲಿದ್ದ ಮಗನನ್ನ ಕೆಲಸಕ್ಕೆಂದು ಕರೆದುಕೊಂಡು ಹೋಗಿ ಕೊಲೆ‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬ್ರಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಶವ ಇಟ್ಟು ಆಕ್ರಂದನ ತೋಡಿಕೊಳ್ಳುತ್ತಿರೋ ಕುಟುಂಬಸ್ಥರು, ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು.
ಘಟನೆ ನಡೆದು ಒಂದು ದಿನ ಕಳೆದರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಕ್ಕೇ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಗುತ್ತಿಗೆದಾರ, ಮನೆ ಮಾಲೀಕ, ಇಂಜನೀಯರ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರ ಒತ್ತಾಯಿಸಿದ್ದು. ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES