Thursday, December 5, 2024

ಪೋಲಿಸರ ಮೇಲೆಯೆ ಹಲ್ಲೆ ಮಾಡಿದ ಗೃಹಲಕ್ಷ್ಮಿಯರು

ಕಲಬುರಗಿ : ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸ್ ಕಾನ್ಸಟೇಬಲ್​ಗಳ ಮೇಲೆ‌ ಹಲ್ಲೆಗೆ ಯತ್ನಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಭೂಸನೂರ ತಾಂಡಾದಲ್ಲಿ ನಡೆದಿದೆ. ಪೋಲಿಸರ ಶರ್ಟ್ ಹಿಡಿದು ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾರೆ.

ಸಬ್ ಅರ್ಬನ್ ಠಾಣೆಯ ಕಾನ್ಸಟೇಬಲ್ ಭೀಮಾ‌ ನಾಯಕ್ ಮತ್ತು ವೆಂಕಟೇಶ್  ಮೇಲೆ ಮಹಿಳೆಯರು ಹಲ್ಲೆಗೆ ಯತ್ನಿಸಿದ್ದಾರೆ. ವಂಚನೆ‌ ಪ್ರಕರಣದಲ್ಲಿ ನೀಲಚಂದ ಅನ್ನೋ ಆರೋಪಿಯನ್ನ ಬಂಧಿಸಲು ತೆರಳಿದ್ದ ಇಬ್ಬರು ಕಾನ್ಸಟೇಬಲ್ ಮೇಲೆ ಕಿರಿಕ್ ತೆಗೆದು ಹಲ್ಲೆಗೆ ಯತ್ನಿಸಿದ್ದಾರೆ.

ನೀಲಚಂದ ಎಲ್ & ಟಿ ಫೈನಾನ್ಸ್ ಕಂಪೆನಿಯಲ್ಲಿ ಕಾರ್ಯನಿರ್ವಾಹ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದನು. ಪೈನಾನ್ಸ್ ಹಣ 1 ಲಕ್ಷ 35 ಸಾವಿರ ರೂಪಾಯಿ ದುರ್ಬಳಕೆ ಆರೋಪದ ಹಿನ್ನಲೆ‌ ಸಬ್​ಅರ್ಬನ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.ನೀಲಚಂದ‌ ವಿರುದ್ದದ ದೂರಿನ ಆಧಾರದ‌ ಮೇಲೆ‌ ಬಂಧಿಸಲು ತೆರಳಿದಾಗ ಕಿರಿಕ್ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ಹೆಚ್ಚನ ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES