ಚನ್ನಪಟ್ಟಣ : ರಾಜ್ಯದಲ್ಲಿ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಚನ್ನಪಟ್ಟಣ ಕ್ಷೇತ್ರವು ರಾಜ್ಯದ ಜನರ ಗಮನ ಸೆಳೆಯುತ್ತಿದೆ. ಒಂದು ಕಡೆ ಡಿಕೆ ಶಿವಕುಮಾರ್ ಚನ್ನಪಟ್ಟಣವನ್ನು ಗೆಲ್ಲಲೆ ಬೇಕು ಎಂದು ಹಠ ತೊಟ್ಟಿದ್ದರೆ. ಮತ್ತೊಂದೆಡೆ ಸ್ವಕ್ಷೇತ್ರವನ್ನು ಗೆಲ್ಲಲೆ ಬೇಕು ಎಂದು ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ. ಮತ್ತೊಂದೆಡೆ ಸಿ.ಪಿ ಯೋಗೆಶ್ವರ್ ಹೇಗಾದರು ಮಾಡಿ ಈ ಬಾರಿ ಗೆಲ್ಲಲೆ ಬೇಕು ಎಂದು ಚುನಾವಣೆಗೆ ಕಸರತ್ತು ಶುರು ಮಾಡಿದ್ದಾರೆ.
ಈ ಬಾರಿಯ ಚನ್ನಪಟ್ಟಣ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಪವರ್ ಟಿವಿಗೆ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದ್ದು. ಸಿ,ಪಿ ಯೋಗೆಶ್ವರ್ಗೆ ಜೆಡಿಎಸ್ ನೀಡಿದ್ದ ಆಫರ್ ತಿರಸ್ಕರಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ಇದರಿಂದಾಗಿ ಸಿ.ಪಿ ಯೋಗೆಶ್ವರ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು. ಚನ್ನಪಟ್ಟಣ ಉಪಚುನಾವಣೆ ರಾಜ್ಯದ ಜನರ ಕುತೂಹಲದ ಕೇಂದ್ರವಾಗಿದೆ.