Wednesday, January 22, 2025

ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲಆದರು ನನಗೆ ಟಿಕೆಟ್ ನೀಡಿದ್ದಾರೆ ಎಂದು ಹೇಳಿದ ಭರತ್ ಬೊಮ್ಮಾಯಿ

ಹಾವೇರಿ : ಶಿಗ್ಗಾಂವಿ ವಿಧಾನಸಭೆ ಚುನಾವಣಾ ಅಭ್ಯರ್ಥಿ ಭರತ್ ಬೊಮ್ಮಾಯಿ ಹೇಳಿಕೆ ನೀಡಿದ್ದು.ನಮ್ಮ ಮೆಚ್ಚಿನ ನಾಯಕರಾದ ಮೋದಿವರು, ಅಮಿತ್ ಷಾ, ಜೆಪಿ ನಡ್ಡಾ, ಉಸ್ತುವಾರು ಅಗರವಾಲ್, ಸಂಸದೀಯ ಮಂಡಳಿ‌ಸದಸ್ಯರು, ರಾಜ್ಯದ ಮೆಚ್ಚಿನ ನಾಯಕ ಯಡಿಯೂರಪ್ಪ, ವಿಜಯೇಂದ್ರ, ಅಶೋಕ್, ಪ್ರಹ್ಲಾದ್ ಜೋಷಿಯವರಿಗೆ ಧನ್ಯವಾದ ತಿಳಿಸ್ತೇನೆ
ಶಿಗ್ಗಾಂವಿ ಜನರ ಸೇವೆ ಮಾಡಲು, ಸಮಾಜ ಸೇವೆ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ನನ್ನ ತಂದೆ ತಾಯಿ ಆಶೀರ್ವಾದದಿಂದ ಈ ಅವಕಾಶ ಸಿಕ್ಕಿದೆ. ತಂದೆಯವರು ಶಿಗ್ಗಾಂವಿ ಸವಣೂರು ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಜನ ಬೆಂಬಲ ಪಡೆದಿದ್ದಾರೆ.ನಾನು ತಂದೆಯವರ ಎಲ್ಲ ಅಭಿವೃದ್ದಿ ಕೆಲಸ ಮುಂದುವರೆಸಿಕೊಂಡು ಹೋಗ್ತೇನೆ.ನಾವು ಟಿಕೆಟ್ ಕೇಳಿರಲಿಲ್ಲ, ವರಿಷ್ಠರು ಗುರುತಿಸಿ‌ ಕೊಟ್ಟಿದ್ದಾರೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಭರತ್ ಬೊಮ್ಮಾಯಿ, ಕ್ಷೇತ್ರದ ಜನರ ಪರಿಚಯ ನನಗಿದೆ, ಅಲ್ಲಿನ‌ ಮನೆಮನೆಗಳಲ್ಲೂ ನಾನು ಗುರುತಿಸಿಕೊಂಡಿದ್ದೇನೆ.ವರಿಷ್ಠರು ಎಲ್ಲವನ್ನೂ ನೋಡಿ ಈ ತೀರ್ಮಾನ ಮಾಡಿದ್ದಾರೆ
ಉಳಿದ ಆಕಾಂಕ್ಷಿಗಳು ಸಹ ನಮ್ಮ ಜತೆಗಿದ್ದಾರೆ ,ಎಲ್ಲರ ಸಹಕಾರ ಇದೆ ಎಂದರು. ರಾಜಕೀಯದಲ್ಲಿ ನನಗೆ ಅಷ್ಟೊಂದು ಆಸಕ್ತಿ ಇರಲಿಲ್ಲ, ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿದ್ದೇನೆ, ನಾಳೆ ನಾನು ಶಿಗ್ಗಾಂವಿ ಕ್ಷೇತ್ರಕ್ಕೆ ಹೋಗ್ತೇನೆ, ಜನರನ್ನ ಭೇಟಿ ಮಾಡುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES