Sunday, December 15, 2024

ಒಂದೇ ದೇವಸ್ಥಾನದಲ್ಲಿ 3 ಬಾರಿ ಕಳ್ಳತನ ಮಾಡಿದ ಖದೀಮರು

ಹಾಸನ : ದೇವಸ್ಥಾನದ ಬಾಗಿಲ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಹಾಸನ ತಾಲ್ಲೂಕಿನ, ಶಂಕರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಶ್ವರ್ಯಕರವಾಗಿ ಇದೆ ದೇವಸ್ಥಾನದಲ್ಲಿ ಇದಕ್ಕೂ ಮುನ್ನ 2 ಬಾರಿ ಕಳ್ಳತನವಾಗಿತ್ತು ಎಂಬ ಮಾಹಿತಿ ದೊರೆತಿದೆ.

ನಗರದ ದೇವಾಲಯದಲ್ಲಿ ಕಳ್ಳತನವಾಗಿದ್ದು. ಲಕ್ಷಾಂತರ ರೂ ಮೌಲ್ಯದ ಬೆಳ್ಳಿ ಸಾಮಾನು, ಹುಂಡಿ ಹಣವನ್ನು ಕಳ್ಳರು ಎಗರಿಸಿದ್ದಾರೆ. ಶಂಕರನಹಳ್ಳಿಗ್ರಾಮದ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಹಾಗೂ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಮಾಡಿರುವ ಚೋರರುಬೆಳ್ಳಿ ವಸ್ತುಗಳು, ಪೂಜಾ ಸಮಾನುಗಳು ಹಾಗೂ ದೇವಾಲಯದ ಒಳಗೆ ಇಟ್ಟಿದ್ದ ಬೀರುವಿನ ಬೀಗ ಒಡೆದು ಅದರಲ್ಲಿಟ್ಟಿದ್ದ ವಸ್ತುಗಳನ್ನು ಕದ್ದೊಯ್ದಿದ್ದಾರೆ.

ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಹಾಗೂ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಮೂರು ಬಾರಿ ಕಳ್ಳತನವಾಗಿದೆ ಎಂದು ಮಾಹಿತಿ ದೊರೆತಿದ್ದು. ಈ ಮುಂಚೆ ಕಳ್ಳತನವಾದಾಗಲ ಕಳ್ಳರನ್ನು ಬಂಧಿಸುವಲ್ಲಿ ಪೋಲಿಸರು ವಿಫಲವಾಗಿದ್ದರು ಎಂಬ ಮಾಹಿತಿ ದೊರೆತಿದೆ.  ಸದ್ಯ ಕಳ್ಳತನವಾಗಿರುವ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES