ಬೆಂಗಳೂಕಸ್ಟಮರ್ಗಳಿಗೆ ಯಾವ ಬೈಕ್ ಬೇಕು ಎಂದು ಆರ್ಡರ್ ಪಡೆದು ಅದೇ ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಬೈಕ್ ಕಳ್ಳರನ್ನು ಪರಪ್ಪನ ಅಗ್ರಹಾರ ಪೋಲಿಸರು ಬಂಧಿಸಿದ್ದು ಆರೋಪಿಗಳಾದ ಶಬಾಜ್ ಖಾನ್ ಹಾಗೂ ಓಂ ಬಂಧಿತ ಆರೋಪಿಗಳು.
ಆನ್ಲೈನ್ ಅಲ್ಲಿ ಪರಿಚಯಯವಾಗಿ ಗೆಳೆಯರಾಗಿದ್ದ ಆರೋಪಿಗಳು. 15 ರಿಂದ 20 ಸಾವಿರಕ್ಕೆ ಬೈಕ್ಗಳನ್ನು ಮಾರಾಟ ಮಾಡುತ್ತಿದ್ದರು. ಮಾರಾಟದ ವೇಳೆ ಯಾರಿಗಾದರು ಕಡಿಮೆ ಬೆಲೆಗೆ ಬೈಕ್ ಬೇಕಿದ್ದರೆ ಕೇಳಿ , ಯಾವ್ ಬೈಕ್ಗಳಾದರು ನೀಡುತ್ತೇವೆ ಎಂದು ಹೇಳುತ್ತಿದ್ದರು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ .
ಕಸ್ಟಮರ್ ಯಾವ ಬೈಕ್ ಬೇಕು ಎಂದು ಕೇಳುತ್ತಿದ್ದರೊ ಅದೇ ಬೈಕ್ಗಳನ್ನುಆರೋಪಿಗಳು ಕದ್ದು ಮಾರಾಟ ಮಾಡುತ್ತಿದ್ದರು. ಬೈಕ್ಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿತಿದ್ದ ಆರೋಪಿಗಳು . ಮಾರಾಟದಿಂದ ಬಂದ ಹಣದಿಂದ ವಿಲಾಸಿ ಜೀವನವನ್ನು ನಡೆಸುತ್ತಿದ್ದರು.
ಬಂಧಿತ ಆರೋಪಿಗಳಿಂದ 12.5 ಲಕ್ಷ ಮೌಲ್ಯದ 13 ಬೈಕ್ಗಳನ್ನು ವಶಪಡಿಸಿಕೊಂಡಿರುವ ಪೋಲಿಸರು. ಆರೋಪಿಗಳನ್ನು ಇನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ .