ನಟ ಜೂನಿಯರ್ ಎನ್ಟಿಆರ್ ನಟನೆಯ ದೇವರ ಸಿನಿಮಾ ಸೆಪ್ಟೆಂಬರ್ 27ರಂದು ಬಿಡುಗಡೆ ಆಗುತ್ತಿದೆ. ಆದರೆ ಅದಕ್ಕೂ ಮೊದಲೇ ಬರೋಬ್ಬರಿ 8 ಕೋಟಿ ಗಳಿಕೆ ಮಾಡಿದೆ. ಕೊರಟಾಲ ಶಿವ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ಬಿಸ್ನೆಸ್ ಮಾಡಿದೆ. ಈ ಚಿತ್ರ ಕೇವಲ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಭರ್ಜರಿ ಗಳಿಕೆ ಮಾಡುತ್ತಿದೆ.
ಅಮೆರಿಕದಲ್ಲಿ ಈ ಸಿನಿಮಾ ಈಗಾಗಲೇ 8 ಕೋಟಿ ರೂಪಾಯಿ ಗಳಿಕೆ ಮಾಡಿದೆ ಅನ್ನೋದು ವಿಶೇಷ. ತೆಲುಗು ಸಿನಿಮಾಗಳಿಗೆ ಅಮೆರಿಕದಲ್ಲಿ ಸಖತ್ ಬೇಡಿಕೆ ಇದೆ. ಸಿನಿಮಾ ರಿಲೀಸ್ಗೂ ಕೆಲ ವಾರ ಮೊದಲೇ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಪ್ರಾರಂಭಿಸಲಾಗುತ್ತದೆ.
ಈಗ ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾಗೂ ಅಮೆರಿಕದಲ್ಲಿ ಬುಕಿಂಗ್ ಆರಂಭ ಆಗಿದ್ದು, 32 ಸಾವಿರ ಟಿಕೆಟ್ಗಳು ಮಾರಾಟ ಆಗಿವೆ. ಇದರಿಂದ 8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಸಿನಿಮಾ ದಾಖಲೆ ಬರೆದಿದೆ.
ಕೆಲವು ವರದಿಗಳ ಪ್ರಕಾರ ಅಮೆರಿಕದ 276 ಲೊಕೇಶನ್ಗಳಲ್ಲಿ ಈ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ. ಭಾರತದ ಅನೇಕರು ಅಮೆರಿಕದಲ್ಲಿ ಇದ್ದಾರೆ. ಅವರು ಮುಗಿಬಿದ್ದು ಸಿನಿಮಾ ಟಿಕೆಟ್ ಬುಕಿಂಗ್ ಮಾಡುತ್ತಿದ್ದಾರೆ.