ದಳಪತಿ ವಿಜಯ್ ಅವರು ತಮ್ಮ 69ನೇ ಸಿನಿಮಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದು ವಿಜಯ್ ಅವರ ಕೊನೆಯ ಸಿನಿಮಾ ಆಗಿರಲಿದೆ. ಇತ್ತೀಚೆಗಷ್ಟೇ ರಿಲೀಸ್ ಆದ ‘GOAT’ ಸಿನಿಮಾ ಫ್ಲಾಪ್ ಆಗಿದೆ. ಈ ಕಾರಣಕ್ಕೆ ಅವರ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎಂದು ‘ಕೆವಿಎನ್ ಪ್ರೊಡಕ್ಷನ್ಸ್’ ಖಚಿತಪಡಿಸಿದೆ.
ದಳಪತಿ ವಿಜಯ್ ಅವರು ರಾಜಕೀಯದಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈ ಕಾರಣಕ್ಕೆ ‘Thalapathy 69’ ಅವರ ಕೊನೆಯ ಸಿನಿಮಾ ಆಗಲಿದೆ ಎಂದು ಹೇಳಲಾಗಿತ್ತು. ಇದಾದ ಬಳಿಕವೂ ಅವರು ಕೆಲವು ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂದು ವರದಿ ಆಗಿತ್ತು. ಆದರೆ, ಆ ರೀತಿ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಈಗ ರಿಲೀಸ್ ಆಗಿರೋ ವಿಡಿಯೋದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಮೊದಲು ವಿಜಯ್ ಸಿನಿಮಾ ರಿಲೀಸ್ ಆದಾಗ ಫ್ಯಾನ್ಸ್ ಹೇಗೆ ಸಂಭ್ರಮಿಸಿದ್ದರು ಎನ್ನುವುದರ ಫೋಟೋ ಹಂಚಿಕೊಳ್ಳಲಾಗಿದೆ.
ವಿಡಿಯೋದ ಕೊನೆಯಲ್ಲಿ ‘ಕೊನೆಯ ಬಾರಿ Thalapathy 69’ ಎಂದು ಬರೆಯಲಾಗಿದೆ. ಈ ಮೂ
ಲಕ ಇದು ವಿಜಯ್ ಕೊನೆಯ ಸಿನಿಮಾ ಎಂಬುದನ್ನು ಖಚಿತಪಡಿಸಿದ್ದಾರೆ.