ತಮಿಳು ಚಿತ್ರರಂಗ ಕಂಡ ಅತ್ಯಂತ ಲ್ಯಾವಿಶ್ ನಟ ಅಂದ್ರೆ ಅದು ಥಲಾ ಅಜಿತ್. ಅವರು ಎಷ್ಟು ಜನಪ್ರಿಯ ನಟರೋ ಅಷ್ಟೇ ಅವರ ಮನೆಯ ಕಾರುಗಳು ಕೂಡ ಜನಪ್ರಿಯತೆ ಕಂಡಿವೆ. ಅಜಿತ್ ಅವರಿಗೆ ಕಾರ್ಗಳ ಕ್ರೇಜ್ ಸಿಕ್ಕಾಪಟ್ಟೆ ಇದೆ. ಹೀಗಾಗಿ ಮಾರುಕಟ್ಟೆಗೆ ಬಂದ ಹೊಸ ಕಾರ್ಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಖರೀದಿಸುವವರೆಗೂ ಅವರಿಗೆ ಸಮಾಧಾನವಿರಲ್ಲವೆನೋ ಗೊತ್ತಿಲ್ಲಾ. ಆಗಾಗ ಅವರ ಹೊಸ ಕಾರ್ಗಳು ಸುದ್ದಿಯಾಗುತ್ತಲೇ ಇರುತ್ತವೆ.
ಈಗ ನಟ ಅಜಿತ್ ಮನೆಯಂಗಳಕ್ಕೆ ಮತ್ತೆರೆಡು ಐಷಾರಾಮಿ ಹಾಗೂ ದುಬಾರಿ ಕಾರುಗಳು ಬಂದಿವೆ.ಅಜಿತ್ ಕಾರ್ಗಳ ಕಲೆಕ್ಷನ್ನಲ್ಲಿ ಈಗ 3.5 ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ಕಾರ್ ಸೇರಿಕೊಂಡಿದೆ. ಅಜಿತ್ ತಮ್ಮ ಪತ್ನಿ ಶಾಲಿನಿ ಅಜಿತ್ಗೋಸ್ಕರ ಅಂತ ಪೋರ್ಶೆ 911 ಜಿಟಿ3 ಕಾರು ಖರೀದಿ ಮಾಡಿ ಕೊಟ್ಟಿದ್ದಾರೆ.
ಈ ಕಾರಿನ ಬೆಲೆ ಬರೋಬ್ಬರಿ 3.5 ಕೋಟಿ ರೂಪಾಯಿ. ಸದ್ಯ ಅಜಿತ್ ಖರೀದಿ ಮಾಡಿದ ಕಾರ್ನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಾಲಿನಿ ಅಜಿತ್ ಅವರು ಕಾರ್ ಜೊತೆಗೆ ಸ್ಟೈಲ್ ಹಾಗೂ ನನ್ನ ಹೃದಯವನ್ನು ಕೊಂಡುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.