ದೆಹಲಿ: ಸಿಬಿಐ, ದೆಹಲಿ ಪೊಲೀಸರು ಹಾಗೂ ಸರ್ಕಾರದ ಇನ್ನಿತರ ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಮತ್ತೆ ನಾಲ್ವರನ್ನು ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.
ಗಮನಿಸಿ: ಬದುಕಿದ್ದಾಗಲೇ ಮರಣ ಪ್ರಮಾಣ ಪತ್ರ ಪಡೆದ ಭೂಪ; ಕಾರಣವೇನು ಗೊತ್ತಾ?
ತಮಿಳರಸನ್ ಕುಪ್ಪನ್ (29), ಪ್ರಕಾಶ್ (26), ಅರವಿಂದನ್ 1 (23) ಮತ್ತು ಅಜಿತ್ (28) ಬಂಧಿತರು. ಆರೋಪಿಗಳನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಶುಕ್ರವಾರ ತಮಿಳುನಾಡಿನ ಪಲ್ಲಿಪಟ್ಟುನಲ್ಲಿ ಬಂಧಿಸಲಾಗಿದೆ. ಸದ್ಯ ವಿಶೇಷ ನ್ಯಾಯಾಲಯವು ಈ ನಾಲ್ವರು ಆರೋಪಿಗಳನ್ನು ನಾಲ್ಕು ದಿನಗಳ ಅವಧಿಗೆ ಇ.ಡಿ ಕಸ್ಟಡಿಗೆ ಒಪ್ಪಿಸಿದೆ.
₹2.6 ಕೋಟಿ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಕಳೆದ ತಿಂಗಳು ಬೆಂಗಳೂರಿನಲ್ಲಿ ನಾಲ್ವರನ್ನು ಇ.ಡಿ ಬಂಧಿಸಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.